ಅಂಕೋಲಾ: ಕೌಟುಂಬಿಕ ಕಲಹಗಳು ಸಾಮಾನ್ಯ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕೆಲವೊಮ್ಮೆ ಇವು ಅತಿರೇಕಕ್ಕೆ ತಿರುಗಿ ಸಹಿಸಲಾಸಾಧ್ಯವಾದಾಗ ಹಿರಿಯರ ಮೂಲಕ ರಾಜಿ ಇಲ್ಲವೇ ಪೊಲೀಸ್ ಠಾಣೆಯ ಮೊರೆ ಹೋಗುವುದು ಅನಿವಾರ್ಯವಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶ ಒಂದರಲ್ಲಿ ಪತಿಯ ನಿರಂತರ ಹಲ್ಲೆಯಿಂದ ಬೇಸತ್ತ ಪತ್ನಿ ತನ್ನ ಗಂಡನ ವಿರುದ್ಧವೇ ದೂರು ದಾಖಲಿಸಿದ್ದಾರೆ.
ರಾತ್ರಿಯ ವೇಳೆ ಮಗಳೊಂದಿಗೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸಿ ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಮುಂದುವರಿದು ಸದ್ಯದಲ್ಲಿಯೇ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಪತ್ನಿ ದೂರಿದ್ದಾರೆ. ಅನುಮಾನದಿಂದಲೋ, ಇನ್ಯಾವುದೋ ಕಾರಣದಿಂದ ಹಲ್ಲೆ ಮಾಡುತ್ತಿದ್ದ ಪತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಇಲಾಖೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ.