ವಂದಿಗೆ ಗ್ರಾ.ಪಂ ಕಾರ್ಯಕ್ರಮ ದಲ್ಲಿ ಶಿಕ್ಷಕ ಜಗದೀಶ ನಾಯಕರವರಿಗೆ ಸನ್ಮಾನ.


ಅಂಕೋಲಾ: ತಾಲೂಕಿನ ವಂದಿಗೆ ಗ್ರಾಪಂದ ಕಾರ್ಯಕ್ರಮದಲ್ಲಿ ಬೋಳೇ ಕಿಪ್ರಾ ಶಾಲಾ ಮುಖ್ಯಾಧ್ಯಾಪಕ ಹಾಗೂ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಗೇರಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಂದಿಗೆ ಗ್ರಾಪಂ ಅಧ್ಯಕ್ಷ ಸತೀಶ ನಾಯಕ ಮಾತನಾಡಿ ಬೋಳೇ ಶಾಲೆ 75 ವರ್ಷಗಳನ್ನು ಪೂರೈಸಿ ಈಗ ಒಂದು ಸಂಭ್ರಮ ಆಚರಿಸಬೇಕು ಎನ್ನುವ ಉದ್ದೇಶವಿದ್ದು ಈ ಶಾಲೆಯ ಸರ್ವಾಂಗೀಣ ಪ್ರಗತಿಗೆ ದುಡಿಯುತ್ತಿರುವ ಶಿಕ್ಷಕ ಜಗದೀಶ ನಾಯಕ ರವರನ್ನು ಸನ್ಮಾನಿಸಿ ಗೌರವಿಸಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ ನಾಯಕ, ನನಗೆ ಈ ಸನ್ಮಾನ ಹೃದಯ ತುಂಬಿಬಂದಿದೆ. ನನ್ನ ಶಾಲೆ 75 ವಸಂತಗಳನ್ನು ಪೂರೈಸುತ್ತಿದ್ದು ಪ್ರತಿಯೊಬ್ಬರ ಸಹಕಾರದಿಂದ ಇಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ನೀರೀಕ್ಷೆ ಇದೆ. ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಂತ ಶಂಕರ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ , ಸಹಾಯಕ ತೋಟಗಾರಿಕಾ ಇಲಾಖೆಯ ಅಧಿಕಾರಿ ಪ್ರಸನ್ನ , ಗ್ರಾಪಂ ಉಪಾಧ್ಯಕ್ಷೆ ದನವಂತಿ ರೇವಣಕರ ಸದಸ್ಯೆ ಪುಷ್ಪಲತಾ ನಾಯಕ,,ಸಮಾಜ ಕಲ್ಯಾಣ ಇಲಾಖೆಯ ಶಾಂತಲಾ ನಾಯಕ, ಪಿಡಿಒ ಗಿರೀಶ ನಾಯಕ  ಉಪಸ್ಥಿತರಿದ್ದರು.