ಹಳಿಯಾಳ : ಬೆಳವಟಗಿ ಗ್ರಾಮದ ಸಾಯಿನಾಥ ಬಸವರಾಜ ಲಮಾಣಿ ಇವರು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪ್ರಧಾನಮಂತ್ರಿ ಪಥಸಂಚಲನದಲ್ಲಿ ಭಾಗವಹಿಸಿ ಅನುಕರಣೀಯ ನಾಯಕತ್ವ ಬದ್ಧತೆಯೊಂದಿಗೆ ಕರ್ತವ್ಯದ ಬಲವಾದ ಪ್ರಜ್ಞೆಯನ್ನು ಪ್ರದರ್ಶಿಸಿರುವುದನ್ನು ಶಾಸಕರಾದ ಆರ್.ವಿ.ದೇಶಪಾಂಡೆಯವರು ಶ್ಲಾಘಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹಳಿಯಾಳ ತಾಲೂಕಿನ ಲಮಾಣಿ ಸಮುದಾಯದ ಸಾಯಿನಾಥ ಬಸವರಾಜ ಲಮಾಣಿ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ಉತ್ತಮ ಮಾರ್ಗದರ್ಶನದ ಮೂಲಕ ತಮ್ಮ ಶೈಕ್ಷಣಿಕ ಕೌಶಲ್ಯವನ್ನು ಮಾತ್ರವಲ್ಲದೆ ದೇಶಭಕ್ತಿಯ ಮನೋಭಾವನೆಯನ್ನು ಪ್ರದರ್ಶಿಸಿದ್ದಾರೆ. ಇಂಥಹ ಕಠಿಣ ಪ್ರಕ್ರಿಯೆಯ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯನ್ನು ಸಾರುವ ಭಾರತದ ಸಾಂವಿಧಾನಿಕ ಪರಂಪರೆ ಆಚರಣೆಯಲ್ಲಿ ಕರ್ನಾಟಕ ರಾಜ್ಯದ ಎನ್. ಸಿ. ಸಿಯ ಸೀನಿಯರ್ ಅಂಡರ್ ಆಫೀಸರ್ ಆಗಿ ರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಅತಿ ಚಿಕ್ಕ ವಯಸ್ಸಿನಲ್ಲಿ ಇವರು ಮಾಡಿದ ಸಾಧನೆ ಇಂದಿನ ಯುವ ಜನಾಂಗಕ್ಕೆ ಪ್ರೇರಣಿಯ ಇದು ಇತರರಿಗೂ ಮಾದರಿಯಾಗಿರಲಿ ಎಂದು ಆರ್.ವಿ.ದೇಶಪಾಂಡೆಯವರು ಆಶಿಸಿದ್ದಾರೆ.