ದಾಂಡೇಲಿ : ಕೇಂದ್ರ ಸರಕಾರ ಮಂಡಿಸಿದ ಮಧ್ಯಂತರ ಬಜೆಟ್ ಬಡವರ ಹಾಗೂ ಮಧ್ಯಮ ವರ್ಗದವರಿಗೆ ಸಹಕಾರಿಯಾಗಿದೆ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರು ಮಠಪತಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೃಷಿ ಕ್ಷೇತ್ರ ಮತ್ತು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ದೇಶದ ಭವಿಷ್ಯ ನಿರ್ಮಿಸುವ ಬಜೆಟ್ ಇದಾಗಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ 75 ಸಾವಿರ ಕೋಟಿ ಅನುದಾನ, ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ, ದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ.
ಮತ್ಸ್ಯ ಯೋಜನೆಯಿಂದ ಸುಮಾರು 55 ಲಕ್ಷ ಉದ್ಯೋಗ ಸೃಷ್ಟಿ, ಮುದ್ರಾ ಯೋಜನೆಯಡಿ ಸಾಲ ಮಂಜೂರು, ಹಾಲು ಉತ್ಪಾದನಾ ಡೇರಿಗಳ ಹೆಚ್ಚಳಕ್ಕೆ ಕ್ರಮ, ದೇಶದಲ್ಲಿ ಏರ್ಪೋಟಗಳ ಸಂಖ್ಯೆ 149 ಕ್ಕೆ ಏರಿಕೆ ಹೀಗೆ ಹತ್ತು ಹಲವು ಜನಪರ ಯೋಜನೆಗಳನ್ನು ಒಳಗೊಂಡ ಈ ಬಜೆಟ್ ಭಾರತದ ಅಭಿವೃದ್ಧಿಗಾಗಿ ಸಮರ್ಪಿತ ಬಜೆಟ್ ಆಗಿದೆ ಎಂದು ಗುರು ಮಠಪತಿಯವರು ತಿಳಿಸಿದ್ದಾರೆ.