ಕಾರವಾರವನ್ನು ‘ಕರ್ನಾಟಕದ ಕಾಶ್ಮೀರ’ವೆಂದು ಬಣ್ಣಿಸಿದ ಟ್ಯಾಗೋರರ ಸ್ಮರಣೆ

ಕಾರವಾರ: ನಗರದ ಟ್ಯಾಗೋರ್ ಚಿತ್ರಕಲಾ ಮಹಾವಿದ್ಯಾಲಯದ ವತಿಯಿಂದ ಸೋಮವಾರ ರವೀಂದ್ರನಾಥ್ ಟ್ಯಾಗೋರ್ ರವರ 81 ನೇ ಪುಣ್ಯತಿಥಿಯ ನಿಮಿತ್ತ ಸಾಗರ ಮತ್ಸ್ಯಾಲಯದ ಪಕ್ಕದಲ್ಲಿರುವ ಟ್ಯಾಗೋರ್ ಪುತ್ಥಳಿಗೆ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು.

ನಗರಸಭೆ ಸದಸ್ಯೆ ರೋಷನಿ ಮಾಳ್ಸೇಸೆಕರ್ ಹೂ ಹಾರ ಹಾಕಿ ಟ್ಯಾಗೋರ್ ಪುತ್ಥಳಿಗೆ ಪೂಜೆ ಸಲ್ಲಿಸಿದರು. ಬಳಿಕ ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಲಾಯಿತು. ಬಿಜೆಪಿ ನಗರ ಘಟಕ ಅಧ್ಯಕ್ಷ ನಾಗೇಶ ಕುರಡೇಕರ್, ಕೆ. ಜಾನ್ಹ್ ಬೆಲ್ ಅವರು ಮಾತನಾಡಿ ರವೀಂದ್ರನಾಥ ಟ್ಯಾಗೋರ್ ರ ಕೊಡುಗೆಗಳನ್ನು ಸ್ಮರಿಸಿದರು. ಕಾರವಾರಕ್ಕೆ ಬಂದಾಗ ಇಲ್ಲಿನ ಸುಂದರ ಪರಿಸರವನ್ನು ಮೆಚ್ಚಿ ಕರ್ನಾಟಕದ ಕಾಶ್ಮೀರ ಎಂದು ವರ್ಣಿಸಿದ ಕುರಿತು ನೆನಪಿಸಿದರು.

ಪುತ್ಥಳಿಗೆ ಸ್ಥಳೀಯ ಕೊಂಕಣ ಖಾರ್ವಿ ಸಮಾಜದವರು ಸುಣ್ಣ ಬಣ್ಣ ಹಚ್ಚಿ ಮೆರುಗು ನೀಡಿದ್ದರು. ಮುಂದಿನ ದಿನದಲ್ಲಿ ಈ ಪುತ್ಥಳಿಗೆ ಹೊಸ ರೂಪವನ್ನು ಕೊಡಲಾಗುವುದುದು ಎಂದು ನಗರಸಭೆ ಸದಸ್ಯೆ ರೋಶನಿ ಮ್ಹಾಳ್ಸೇಕರ ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಉಲ್ಲಾಸ್ ಕೇಣಿ, ಮಹೇಂದ್ರ ಬಾನಾವಳಿ, ಸಂದೇಶ ಶೆಟ್ಟಿ, ಅನಮೊಲ ರೇವಣಕರ್,ಕೃಷ್ಣಾ ಬಾನಾವಳಿ, ಗುರುನಾಥ ಮಾಳಸೆಕರ್, ಗಣೇಶ ಕುಡತರಕರ, ಸುಮಿತ್ರಾ ಮಾಲಸೆಕರ್, ಫಾಲ್ಗುಣ ಮಾಲಸೆಕರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.