ಹಳಿಯಾಳ ಪಟ್ಟಣದಲ್ಲಿ ಮಾಟ ಮಂತ್ರ : ಪೊಲೀಸ್ ಠಾಣೆಯ ಮೆಟ್ಟಿಲೇರಿದ ಚೂ ಮಂತ್ರಕಾಳಿ ಪ್ರಕರಣ

ಹಳಿಯಾಳ : ಮೂಢನಂಬಿಕೆಗಳು ಇನ್ನೂ ಪ್ರಚಲಿತದಲ್ಲಿ ಇದೆಯೇ ಎನ್ನುವ ಹತ್ತು ಹಲವು ಅನುಮಾನಗಳ ನಡುವೆಯೂ, ಮಾಟ, ಮಂತ್ರ, ತಂತ್ರಗಳು ಬಹಳಷ್ಟು ಕಡೆ ನಡೆಯುತ್ತಲೇ ಇದೆ. ಬಹಳಷ್ಟು ಕಡೆ ಕೋಲು ಮುರಿಯುವುದಕ್ಕೂ ಹಾವು ಸಾಯುವುದಕ್ಕೂ ಸರಿ ಎಂಬಂತೆ ಮಾಟ ಮಂತ್ರಗಳು ನಡೆದು ಹೋಗುತ್ತದೆ.

ಅಂದ ಹಾಗೆ ಬೆಳೆಯುತ್ತಿರುವ ಹಳಿಯಾಳ ಪಟ್ಟಣದಲ್ಲಿ ಮೂಡನಂಬಿಕೆಯ ಪರಮಾವಧಿಗೆ ಇಂಬು ನೀಡುವಂತೆ ಪಟ್ಟಣದ ಮೋತಿಕೆರೆ ಕ್ರಾಸ್ ಹತ್ತಿರದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ಅಂಗಡಿಯ ಮುಂದೆ ಐನಾತಿ ದಂಪತಿಗಳು ದ್ವಿಚಕ್ರ ವಾಹನದಲ್ಲಿ ಬಂದು ದಾರಕಟ್ಟಿದ ಲಿಂಬುವನ್ನು ಎಸೆದು ಹೋಗಿದ್ದಾರೆ.

ದಾರ ಕಟ್ಟಿದ್ದು ನೋಡಿದರೆ ಮಂತ್ರ ತಂತ್ರ ಮಾಡಿಯೇ ಲಿಂಬುವನ್ನು ಎಸೆದಿರಬಹುದೆಂದು ಶಂಕಿಸಲಾಗುತ್ತಿದೆ. ಉಗ್ರರು ಬಾಂಬು ಎಸೆದು ದೇಶಕ್ಕೆ ಅನ್ಯಾಯ ಮಾಡುವ ರೀತಿಯಲ್ಲಿ, ಇಲ್ಲಿ ಐನಾತಿ ದಂಪತಿಗಳು ಅಂಗಡಿಯ ಮುಂಭಾಗ ಲಿಂಬುವನ್ನು ಎಸೆದು ಅವರನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಹಾಗೆ ಮಂತ್ರಿಸಿದ ಲಿಂಬು ಎಸೆದೆರೆ ಎಲ್ಲವೂ ಆಗುತ್ತದೆ ಎಂದಾದರೆ, ಲಿಂಬೆ ಹಣ್ಣಿನ ದರ ದುಬಾರಿಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ಅಂದಹಾಗೆ ಈ ಘಟನೆಯ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎನ್ನುವ ಮಾಹಿತಿ ಇದೆ. ಈ ದೂರು ನೋಡಿದರೆ ಮತ್ತು ಲಿಂಬು ಎಸೆಯುವ ಸಿ ಸಿ ಕ್ಯಾಮೆರಾದ ದೃಶ್ಯಾವಳಿ ನೋಡಿದರೆ ವಿನೋದರ ಮನಸ್ಸಿಗೂ ವಿನೋದ ಬರೆದೆ ಇರಲು ಸಾಧ್ಯವೇ ಎಂಬ ಪ್ರಶ್ನೆ ಹಳಿಯಾಳ ಪಟ್ಟಣದಲ್ಲಿ ಚರ್ಚೆಯಲ್ಲಿದೆ. ಈ ಘಟನೆ ಮೂಡನಂಬಿಕೆಗೆ ಸೂಕ್ತ ಉದಾಹರಣೆಯಾದರೂ, ಇದರಿಂದ ಮನಸ್ಸಿಗೆ ಆಘಾತವಾಗದೇ ಇರಲು ಸಾಧ್ಯವೆ.

ಇನ್ನೊಬ್ಬರ ಬದುಕನ್ನು, ಭವಿಷ್ಯವನ್ನು ಹಾಳು ಮಾಡಲು ಹೊರಟರೇ, ಹಾಳು ಮಾಡಲು ಹೊರಟವರ ಬದುಕಿನಲ್ಲಿ ಸಂಭ್ರಮ ಕಾಣಲು ಸಾಧ್ಯವಿದೆಯೇ. ಮೃತ್ಯು ಸಹಜವಾಗಿ ಬರುತ್ತದೆ ಆದರೆ ಅಪಮೃತ್ಯು ಅಸಹಜವಾಗಿ ಬರುತ್ತದೆ. ನಾವು ಮಾಡಿದ ಪುಣ್ಯಕಾರ್ಯಗಳಿಂದ ಮೃತ್ಯು ಬಂದರೆ, ಪಾಪಕರ್ಮಗಳಿಂದ ಅಪಮೃತ್ಯು ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಇನ್ನಾದರೂ ಈ ಐನತಿ ದಂಪತಿಗಳು ತಿಳಿದುಕೊಳ್ಳಲಿ ಎನ್ನುವುದೇ ಈ ವರದಿಯ ಆಶಯ.