ಜೂನಿಯರ್ ಶಾನ್ಸು ಫೈಟ್ ಕ್ರೀಡೆಯಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಧನ್ವಿ ಕುಮಾರ ನಾಯ್ಕ

ಹೊನ್ನಾವರ: ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗದಲ್ಲಿರುವ ವಿದ್ಯಾರ್ಥಿನಿ ಧನ್ವಿ ಕುಮಾರ ನಾಯ್ಕ ಕೊಯಿಮತ್ತೂರಿನಲ್ಲಿ ನಡೆದ ಖೇಲೋ ಇಂಡಿಯಾ ವುಮೆನ್ಸ್ |ವುಶೋ ಲೀಗ್ ಸೌತ್ ಜೋನ್‌ನ ಸಬ್ ಜೂನಿಯರ್ ಶಾನ್ಸು ಫೈಟ್ ಕ್ರೀಡೆಯ 27 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಮಾರ್ಚ್‌ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಧನ್ವಿ ಕುಮಾರ ನಾಯ್ಕ ಹೊನ್ನಾವರದ ರಾಯಲ್ ಅಕಾಡೆಮಿಯ ಉತ್ತರ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ ಜನರಲ್ ಸೆಕ್ರೆಟರಿ ರಾಘವೇಂದ್ರ ಆರ್. ಹೊನ್ನಾವರ ಅವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈಕೆ ಕುಮಟಾದ ಕೋಡ್ಕಣಿ ಗ್ರಾಮದ ಕುಮಾರ ರಾಮ ನಾಯ್ಕ ಹಾಗೂ ಸುವರ್ಣ ನಾಯ್ಕ ಇವರ ಪುತ್ರಿಯಾಗಿದ್ದಾರೆ.ಈಕೆಯ ಸಾಧನೆಗೆ ಪಾಲಕರು,ಊರ-ನಾಗರಿಕರು,ಜಿಲ್ಲಾ ವಶು ಅಲೋಶಿಯೆಸನ್ ಜಿಲ್ಲಾಧ್ಯಕ್ಷ ಸತ್ಯಾ ಜಾವಗಲ್ ಹರ್ಷ ವ್ಯಕ್ತಪಡಿಸಿದ್ದಾರೆ