ಶಂಕಿತ ಉಗ್ರನ ಜೊತೆಗೆ ಭಟ್ಕಳದ ಆಜಾದ್ ನಗರದ ಮಹಿಳೆಯ ನಂಟು

ಭಟ್ಕಳಕ್ಕೆ ಮುಂಬೈನ ಎಟಿಎಸ್ ತಂಡದಿಂದ ಮಹಿಳೆಯ ವಿಚಾರಣೆ

ಭಟ್ಕಳ: ಶಂಕಿತ ಉಗ್ರನ ಜೊತೆ ಭಟ್ಕಳದ ಮಹಿಳೆಯೋರ್ವಳು ಹೊಂದಿರುವ ನಂಟು ಹಿನ್ನೆಲೆಯಲ್ಲಿ ಮುಂಬೈನ ಎಟಿಎಸ್ ತಂಡಕ್ಕೆ ಆಗಮಿಸಿದ್ದು ಭಟ್ಕಳದ ಪುರಸಭೆಯ ಆಜಾದ್ ನಗರದ ಮಹಿಳೆಯೋರ್ವಳ ಮನೆಗೆ ಬುಧವಾರ ಸಂಜೆ 5 ಗಂಟೆಗೆ ಭೇಟಿ ನೀಡಿ ಗುರುವಾರ ಸಂಜೆ 5.30 ರ ತನಕ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿರುವ ಘಟನೆ ವರದಿಯಾಗಿದೆ.

ಮುಂಬೈನ ನಾಸಿಕನ ಶಂಕಿತ ಉಗ್ರ ಹುಜೈಫ್ ಅಬ್ದುಲ್ ಅಜೀಜ್ ಶೇಖ್(30) ಇತನು ಭಟ್ಕಳಕ್ಕೆ ಜನವರಿ 17 ರಂದು ಜಾಲಿಯ ಆಜಾದ್ ನಗರದ ಮಹಿಳೆಯ ಜೊತೆಗೆ ಸಂಪರ್ಕದಲ್ಲಿದ್ದರ ಕುರಿತಾದ ಖಚಿತ ಮಾಹಿತಿ ಮೇರೆಗೆ ಭಟ್ಕಳಕ್ಕೆ ಮುಂಬೈನ ಎಟಿಎಸ್ ತಂಡವು ಪರಿಶೀಲನೆಗೆ ಬುಧವಾರದಂದು ಸಂಜೆ 5 ಗಂಟೆಯ ವೇಳೆಗೆ ಈಕೆಯ ಮನೆಗೆ ಸ್ಥಳೀಯ ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಹೋಗಿ ವಿಚಾರಣೆ ನಡೆಸಿದ್ದಾರೆ.

ನೇರವಾಗಿ ಈಕೆಯ ಮನೆಗೆ ತೆರಳಿದ ಎಟಿಎಸ್ ತಂಡದ ಐದು ಅಧಿಕಾರಿಗಳು ಈಕೆಗೆ ಶಂಕಿತ ಉಗ್ರ ಅಜೀಜ್ ಶೇಜ್ ಅವರೊಂದಿಗಿನ ಸಂಬಂಧ ಹಾಗೂ ಸಂಪರ್ಕದ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಪರಿಶೀಲನೆಯ ವೇಳೆ ಮಹಿಳೆಯು ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾಳೆಂದು ಮೂಲಗಳಿಂದ ಲಭ್ಯವಾಗಿದೆ.

ಶಂಕಿತ ಉಗ್ರ ಹುಜೈಪ್ ಅಬ್ದುಲ್ ಅಜೀಜ್ ಶೇಕ ಇವನು ಜನವರಿ 23 ರಂದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಪೊಲೀಸ್ ಠಾಣೆಯಲ್ಲಿ ದಾಖಲಾದಪ್ರಕರಣವೊಂದರಲ್ಲಿ ಈತನನ್ನು ಬಂಧಿಸಿದ ವೇಳೆ ಆತನ ಜೊತೆಗೆ ಇರುವವರ ಸಂಪರ್ಕದಲ್ಲಿರುವವರ ಪತ್ತೆಯ ವೇಳೆ ಭಟ್ಕಳದ ಮಹಿಳೆಯೊಂದಿಗೆ ಸದ್ಯ ಸಂಪರ್ಕದಲ್ಲಿರುವುದು ತಿಳಿದು ಬಂದಿದ್ದು ಈ ಮಾಹಿತಿಯನ್ನಾಧರಿಸಿ ಭಟ್ಕಳಕ್ಕೆ ಅಧಿಕಾರಿಗಳು ಆಗಮಿಸಿದ್ದಾರೆ.

ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮಹಿಳೆಯು ಆನ್ಲೈನ್ ನಲ್ಲಿ ಅರೇಬಿಕ್ ಭಾಷೆಯ ಪಾಠವನ್ನು ಬೋದಿಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಹಾಗೂ ಈಕೆಯು ಮದುವೆಯಾಗಿದ್ದು ಗಂಡ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದವನು ಮೃತಪಟ್ಟಿರುವ ಬಗ್ಗೆಯು ಮತ್ತು ಸದ್ಯ ಈಕೆಯ ತಂದೆಗೆ 7 ಜನ ಹೆಣ್ಣುಮಕ್ಕಳು ಇದ್ದು ಇವಳು ಗಂಡ ಮೃತಪಟ್ಟ ನಂತರ ತಂದೆ ತಾಯಿಯೊಂದಿಗೆ ವಾಸವಾಗಿದ್ದಾಳೆ.

ಶಂಕಿತ ಉಗ್ರನ ಜೊತೆಗೆ ಈಕೆಯು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ನಂತರ ಇಬ್ಬರಲ್ಲಿಯು ಸ್ನೇಹ ಬೆಳೆದು ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಪ್ರಮುಖವಾಗಿ ಮಹಿಳೆ
ಉಗ್ರನಿಗೆ ತನ್ನ ಬ್ಯಾಂಕ್ ಖಾತೆಯಿಂದ ಆಗಾಗ ಹಣ ವರ್ಗಾವಣೆ ಮಾಡಿರುವ ಬಗ್ಗೆ ತಿಳಿಸಿದ್ದು ಇವರಿಗೆ ಒಟ್ಟು 5 ಲಕ್ಷ ರೂಪಾಯಿ ಶಂಕಿತ ಉಗ್ರನ ಖಾತೆಗೆ ವರ್ಗಾವಣೆ ಮಾಡಿರುವ ಬಗ್ಗೆ ಮಹಿಳೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ.

ಇನ್ನು ಶಂಕಿತ ಉಗ್ರ ಅಜೀಜ್ ಶೇಕ್ ಭಟ್ಕಳಕ್ಕೆ ಜನವರಿಗೆ 17 ರಂದು ಬಂದಿದ್ದು ತಾಲೂಕಿನ ಖಾಸಗಿ ಲಾಡ್ಜವೊಂದರಲ್ಲಿ ಒಂದು ದಿನ ಉಳಿದು ಹೋದ ಕುರಿತು ಮತ್ತು ಮಹಿಳೆಯು ಆತನೊಂದಿಗೆ ಉಳಿದಿದ್ದ ಬಗ್ಗೆ ಮಾಹಿತಿ ತಿಳಿದು ಬಂದಿದೆ