ಹೊನ್ನಾವರ : ತಾಲೂಕಿನ ಖರ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಗೇರಿಯಲ್ಲಿ ಕಲಾವಿದನೊರ್ವನ ಕೈಚಳಕದಲ್ಲಿ ಥರ್ಮಾಕೋಲ್‌ನಿಂದ ಆಯೋಧ್ಯ ರಾಮಮಂದಿರ ಮಾದರಿ ಆಕರ್ಷಣಿಯವಾಗಿ ಮೂಡಿ ಬಂದಿದೆ…
ರಾಮ ಹಾಗೂ ರಾಮಮಂದಿರ ಅನ್ನೋದೆ ಹಿಂದೂಗಳಿಗೆ ಹೆಮ್ಮೆ, ಭಕ್ತಿಭಾವ. ಆಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಹೊನ್ನಾವರ ತಾಲೂಕಿನಾದ್ಯಂತ ರಾಮನ ಸ್ಮರಣೆ ಜೋರಾಗಿದೆ. ಎಲ್ಲಿ ನೋಡಿದರಲ್ಲಿ ಕೆಸರಿಪತಾಕೆ, ಶ್ರೀರಾಮ, ಹನುಮ, ಅಯ್ಯೋಧ್ಯೆ ರಾಮಮಂದಿರವಿರುವ ಬ್ಯಾನರ್‌ಗಳೇ ರಾರಾಜಿಸುತ್ತಿವೆ. ಇತ್ತಿಚಿಗೆ ಗೇರುಸೊಪ್ಪಾದ ಯುವಕ ಪ್ರದೀಪ ನಾಯ್ಕ್ ಅವರು ಚಾಕ್‌ಪೀಸ್‌ಗಳಲ್ಲಿ ರಾಮಮಂದಿರ ಮಾದರಿ ನಿರ್ಮಿಸಿ ಗಮನ ಸೆಳೆದಿದ್ರು.
ಇದೀಗ ಇನ್ನೊರ್ವ ಯುವ ಕಲಾವಿದ ಕಡಗೇರಿಯ ಶ್ರೀಕಾಂತ ನಾಯ್ಕ ಕೈಚಳಕದಲ್ಲಿ ಥರ್ಮಾಕೋಲ್‌ನಿಂದ ಥೇಟ್ ಅಯೋಧ್ಯೆ ರಾಮಮಂದಿರ ಎಂಬಂತೆ ಬಾಸವಾಗುವ ಮಾಧರಿ ಮಂದಿರ ಸುಂದರವಾಗಿ ಮೂಡಿಬಂದಿದ್ದು, ನೋಡುಗರನ್ನ ಆಕರ್ಷಿಸುತ್ತಿದೆ. ಕಡಗೇರಿ ಗಣೇಶೋತ್ಸವ ಯುವಕ ಸಂಘದಲ್ಲಿ ಈ ಕಲಾಕೃತಿ ನಿರ್ಮಿಸಿದ್ದು, ಅಯ್ಯೋದ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನದಂದೆ ಕಡಗೇರಿ ಯುವಕ ಸಂಘದಲ್ಲಿಯೂ ಪ್ರಭು ಶ್ರೀರಾಮನ ಹೆಸರಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಈ ಮಾದರಿ ಕಲಾಕೃತಿಯನ್ನು ಅಂದೇ ಉದ್ಘಾಟಿಸಲಾಗುವುದು ಎಂದು ಕಲಾವಿದ ಶ್ರೀಕಾಂತ್ ನುಡಿಸಿರಿ ವಾಹಿನಿಗೆ ತಿಳಿಸಿದ್ದಾರೆ. ಕಡಗೇರಿ ಯುವಕ ಸಂಘದವರು ಕಲಾಕೃತಿ ನಿರ್ಮಾಣ ಮಾಡಿ ಎಂದಾಗ ಖುಷಿಯಿಂದ ಒಪ್ಪಿಕೊಂಡಿದ್ದೆ. ಎಲ್ಲರು ಸಹಕರಿಸಿದ್ದಾರೆ. ಕೇವಲ ಒಂದುವರೆ ದಿನದ ಅತಿ ಕಡಿಮೆ ಅವಧಿಯಲ್ಲೇ ಈ ಮಾದರಿ ಕಲಾಕೃತಿ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ರು…
ಥರ್ಮಾಕೋಲ್‌ನಲ್ಲಿ ರಾಮಮಂದಿರ ಮೂಡಿಸುವುದಕ್ಕೆ ಸಾಕಷ್ಟು ಶ್ರಮ ಇರುತ್ತೆ. ನಮ್ಮೂರಿನ ಯುವ ಪ್ರತಿಭೆ ಕಲಾವಿದ ಶ್ರೀಕಾಂತ ಇದನ್ನು ನಮ್ಮೆಲ್ಲರ ಅಪೇಕ್ಷೆ ಮೇರೆಗೆ ಮಾಡಿಕೊಟ್ಟಿದ್ದಾರೆ ಎಂದು ಕಲಾವಿದನ ಕಲೆ ಮೆಚ್ಚಿದ ರಮೇಶ್ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ…