ಮುಂಡಗೋಡದ ಚೌಡಳ್ಳಿಯಲ್ಲಿ ಚೌಡಳ್ಳಿ ಪಂಚಾಯತ್ ಪ್ರೀಮಿಯರ್ ಲೀಗ್ 3 ನೇ ಆವೃತ್ತಿ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ.

ಮುಂಡಗೋಡ : ಕ್ರೀಡಾಪಟುಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಯುವಕರು ದುಶ್ಚಟಕ್ಕೆ ಬಲಿಯಾಗದೆ ಸದೃಢ ದೇಹವನ್ನ ಕಾಪಾಡಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಯನ್ನ ಮಾಡಿ, ಸದೃಢ ದೇಹ ಉತ್ತಮ ಅರೋಗ್ಯ ಸಾಧನೆಗೆ ಬಹು ಮುಖ್ಯ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಜಿ ಟಿ ನಾಯ್ಕ ಕಾರವಾರ ಕಿವಿಮಾತು ಹೇಳಿದರು
ಅವರು ಮುಂಡಗೋಡು ತಾಲೂಕಿನ ಚೌಡಳ್ಳಿಯಲ್ಲಿ ನಡೆದ ಚೌಡಳ್ಳಿ ಪಂಚಾಯತ್ ಪ್ರೀಮಿಯರ್ ಲೀಗ್ 3 ನೇ ಆವೃತ್ತಿ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಬಹುಮಾನ ವಿತರಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಲ್‌.ಟಿ. ಪಾಟೀಲ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ನಡೆಯುತ್ತಿರುವುದು ಮತ್ತು ಯಶಸ್ವಿಗೊಳ್ಳುತ್ತಿರುವುದು ಸಂತೋಷದ ವಿಷಯ ಮುಂದಿನ ದಿನದಲ್ಲಿ ಕಬಡ್ಡಿ, ವಾಲಿಬಾಲ್, ಕುಸ್ತಿ ಹಾಗೂ ಪ್ರಮುಖ ಕ್ರೀಡೆಗಳಿಗೂ ಆದ್ಯತೆ ನೀಡಿ ಗ್ರಾಮೀಣ ಭಾಗದ ಪ್ರತಿಭೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ಊರಿನ ಕೀರ್ತಿ ಹೆಚ್ಚಿಸಿ ಎಂದರು.
ಊರಿನ ಹಿರಿಯರಾದ ಪಿ ಜಿ ಪಾಟೀಲ್ ಮಾತನಾಡಿ ಯುವಕರ ಸಾಧನೆ ದೇಶಕ್ಕೆ ಶಕ್ತಿಯಾಗಲಿದೆ ನಿಮ್ಮ ವಿಜಯದಿಂದ ಊರಿನ ಹಾಗೂ ತಂದೆ ತಾಯಿಯರ ಸಂತಸವನ್ನ ಹೆಚ್ಚಿಸುತ್ತದೆ ಸಾಧನೆ ಕಡೆಗೆ ನಿಮ್ಮ ಗುರಿಯಿರಲಿ ಎಂದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣ್ಯರು  ಉಪಸ್ಥಿತರಿದ್ದರು.