ಸಿದ್ದಾಪುರ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ದೇಶದಾದ್ಯಂತ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿರುವ ಹಿನ್ನಲೆಯಲ್ಲಿ ಬಿಜೆಪಿ ಮತ್ತು ದೇವಸ್ಥಾನ ಕಮೀಟಿ ಹಾಗೂ ನಾಗರೀಕರ ವತಿಯಿಂದ ತಾಲೂಕಿನ ಐಸೂರಿನ ಶ್ರೀ ವೀರಭದ್ರ ಸಹಿತ ಗೌರಿಶಂಕರ ದೇವಾಲಯದಲ್ಲಿ ಬುಧವಾರ ಸ್ವಚ್ಛತಾ ಕಾರ್ಯ ನಡೆಯಿತು.
ಈ ವೇಳೆ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದೇವರಿಗೆ ಪೂಜೆ ಸಲ್ಲಿಸಿ ಸ್ವಚ್ಛ ತೀರ್ಥ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಕಾರ್ಯಕರ್ತರು ಹಾಗೂ ಊರಿನ ನಾಗರೀಕರೊಂದಿಗೆ ದೇವಾಲಯದ ಸುತ್ತಲೂ ಸ್ವಚ್ಛತೆಯನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ, ತಿಮ್ಮಪ್ಪ ಎಂ.ಕೆ, ಕೃಷ್ಣಮೂರ್ತಿ ನಾಯ್ಕ ಐಸೂರು, ಮಂಗಲಾ ಗೌಡ, ತೋಟಪ್ಪ ನಾಯ್ಕ, ಎಂ.ಎನ್.ಹೆಗಡೆ, ಮಂಜುನಾಥ್ ಭಟ್, ಜಯಂತಿ ಹೆಗಡೆ, ಸುರೇಶ್ ನಾಯ್ಕ ಬಾಲಿಕೊಪ್ಪ, ಎ.ಜಿ.ನಾಯ್ಕ, ದೇವಸ್ಥಾನ ಕಮಿಟಿ ಅಧ್ಯಕ್ಷ ರಾಮನಾಥ ಹೆಗಡೆ, ಗಜಾನನ ಭಟ್ ದಾನಮಾಂವ, ರಮಾನಂದ ಹೆಗಡೆ, ಗಣಪತಿ ಆಚಾರಿ, ದಿನೇಶ್, ಗೋಪಾಲ ಹೆಗಡೆ, ನಾಗರಾಜ್ ಮಠದವರಮನೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ದೇವಸ್ಥಾನ ಕಮಿಟಿ ಸದಸ್ಯರು, ಊರ ನಾಗರೀಕರು ಹಾಜರಿದ್ದರು.