ಕ್ಯೂಬಾ: ಮತಾಂಜಾಸ್ ನಗರದ ತೈಲ ಸಂಗ್ರಹಣಾ ಘಟಕಕ್ಕೆ ಸಿಡಿಲು ಬಡಿದ ಪರಿಣಾಮ ಭಾರಿ ಬೆಂಕಿ ಹೊತ್ತಿಕೊಂಡಿದೆ. ಈ ಅವಘಡದಿಂದ ಸುಮಾರು 121 ಜನರು ಗಾಯಗೊಂಡಿದ್ದು, 17 ಮಂದಿ ಅಗ್ನಿಶಾಮಕ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ.
ಶುಕ್ರವಾರ ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಈ ವೇಳೆ ಇಂಧನ ಟ್ಯಾಂಕ್ಗೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿದೆ. ಘಟನಾ ಸ್ಥಳದಿಂದ 1,900 ಜನರನ್ನು ಸ್ಥಳಾಂತರಿಸಲಾಗಿದೆ.
ಮತಾಂಜಾಸ್ ಸೂಪರ್ ಟ್ಯಾಂಕರ್ ಬೇಸ್ನಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಇನ್ನೂ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕ್ಯೂಬಾ ಪ್ರೆಸಿಡೆನ್ಸಿ ಅಪ್ಡೇಟ್ ಪ್ರಕಾರ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಲ್ಲಿ ಇಂಧನ ಸಚಿವ ಲಿವಾನ್ ಅರೋಂಟೆ ಕೂಡ ಸೇರಿದ್ದಾರೆ.