ದಾಂಡೇಲಿ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಗರಸಭೆ ದಾಂಡೇಲಿ ಹಾಗೂ ಉತ್ತರ ಕನ್ನಡ ಜಿಲ್ಲಾ ದೇಹದಾರ್ಡ್ಯ ಸಂಸ್ಥೆ ಇವರ ಸಹಯೋಗದೊಂದಿಗೆ ಜ:17 ರಂದು ಸಂಜೆ 5 ಗಂಟೆಗೆ ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯ ದೇಹದಾರ್ಡ್ಯ ಸ್ಪರ್ಧೆ ಹಾಗೂ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯ ತಂಡದ ಆಯ್ಕೆಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್. ವಿ. ದೇಶಪಾಂಡೆರವರು ನೆರವೇರಿಸಲಿದ್ದಾರೆ. ಕ.ವಿ.ವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ. ಬಿ. ಎಂ. ಪಾಟೀಲ ಮತ್ತು ಕಮಲಾ ಬಾಳಿಗ ಶಿಕ್ಷಣ ಮಹಾವಿದ್ಯಾಲಯ ಕುಮಟಾ ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಜಿ. ಡಿ. ಭಟ್, ದಾಂಡೇಲಿಯ ತಹಶೀಲ್ದಾರರಾದ ಶೈಲೇಶ ಪರಮಾನಂದ, ನಗರಸಭೆಯ ಆಯುಕ್ತರಾದ ರಾಜಾರಾಮ್ ಪವಾರ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಾಯಿದಾ ಪಠಾಣ ಹಾಗೂ ನಗರ ಸಭೆಯ ಸರ್ವಸದಸ್ಯರೂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿವಿಧ ವಿಭಾಗಗಳ ಚಿನ್ನದ ಪದಕ ವಿಜೇತರಲ್ಲಿ ಒಬ್ಬರನ್ನು ಮಿಸ್ಟರ್ ಕರ್ನಾಟಕ ಯುನಿವರ್ಸಿಟಿ ಎಂದು ಘೋಷಿಸಲಾಗುವುದು.
ಹೊನಲು ಬೆಳಕಿನಲ್ಲಿ ಜರುಗುವ ಈ ಸ್ಪರ್ಧೆಯು ಅತ್ಯಂತ ಮನೋರಂಜನೀಯವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಾಚಾರ್ಯ ಡಾ.ಎಂ.ಡಿ.ಒಕ್ಕುಂದ ಅವರು ವಿನಂತಿಸಿದ್ದಾರೆ.