ಬರ್ಚಿ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನದ ಮೇಲೆ ಜಿಗಿದ ಕಾಡುಕೋಣ :ಕಾರು ಜಖಂ, ಪವಾಡ ಸದೃಶ್ಯವಾಗಿ ಕಾಡುಕೋಣ ಮತ್ತು ಪ್ರಯಾಣಿಕರು ಪಾರು

ದಾಂಡೇಲಿ : ಕಾಡುಕೋಣವೊಂದು ಏಕಾಏಕಿ ರಸ್ತೆ ದಾಟಲು ಮುಂದಾಗಿ ಚಲಿಸುತ್ತಿದ್ದ ವಾಹನದ‌ ಮೇಲೆ ಜಿಗಿದ ಪರಿಣಾಮವಾಗಿ ಕಾರು ಜಖಂಗೊಂಡು, ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಕಾಡುಕೋಣ ಪವಾಡ ಸದೃಶ್ಯವಾಗಿ ಪಾರಾದ ಘಟನೆ ದಾಂಡೇಲಿ ತಾಲೂಕಿನ ಬರ್ಚಿ ರಸ್ತೆಯಲ್ಲಿ ನಡೆದಿದೆ.

ಗಣೇಶಗುಡಿಯಿಂದ ಪ್ರವಾಸ ಮುಗಿಸಿ ಹಿಂದುರುಗಿ ಹುಬ್ಬಳ್ಳಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬರ್ಚಿ ಕ್ರಾಸ್ ದಾಟಿ ಮುಂದೆ ಹೋಗುತ್ತಿದ್ದಾಗ, ಬರ್ಚಿ ರಸ್ತೆಯಲ್ಲಿ ಏಕಾಏಕಿ ಕಾಡುಕೋಣ ರಸ್ತೆ‌ ದಾಟಲು ಮುಂದಾಗಿದೆ. ಕಾಡುಕೋಣವನ್ನು ನೋಡಿದೊಡನೆಯೆ ಏಕಾಏಕಿ ಚಾಲಕ ಕಾರು ನಿಲ್ಲಿಸಿದ್ದಾನೆ. ಕಾಡುಕೋಣ ಹೆದರಿ ಕಾರಿನ ಮೇಲೆ ಜಿಗಿದು ಮುಂದಕ್ಕೆ ಹೋಗಿದೆ. ಕಾರಿನ ಮುಂಭಾಗ ಹಾಗೂ ಮುಂಬಾಗದ ಗ್ಲಾಸ್ ಮತ್ತು ಕಾರಿನ ಮೇಲ್ಭಾಗ ಸಂಪೂರ್ಣ ಜಖಂಗೊಂಡಿದೆ.‌ ಆದರೆ ಕಾರಿನಲ್ಲಿದ್ದ ಪ್ರಯಾಣಿಕರು ಮತ್ತು ಕಾಡುಕೋಣ ಪವಾಡ ಸದೃಶವಾಗಿ ಪಾರಾಗಿದ್ದಾರೆ.