
ಅಂಕೋಲಾ: ಬಟ್ಟೆ ಹೊಲಿಸಲು ಹೋದ ನೆಪದಲ್ಲಿ ಮಹಿಳೆಯ ಬಂಗಾರದ ಆಭರಣಗಳನ್ನು ಕದ್ದ ಆರೋಪದ ಮೇಲೆ ಈರ್ವರು ಮಹಿಳೆಯರ ವಿರುದ್ಧ ಅಂಕೋಲಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಕೋಟೆವಾಡದ ರೋಮಾನಾ ಹುಸೇನ್‌ಸಾಬ್ ಮೌಲಾಲಿ(32) ಹಾಗೂ ಅಮದಳ್ಳಿಯ ಮಹಾದೇವವಾಡಾ ಸುಮೇಧಾ ದಿಗಂಬರ ಮಹಾಲೆ(27) ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಪಟ್ಟಣದ ಶೆಡಗೇರಿ ಕೋಟೆವಾಡ ರಸ್ತೆಯಲ್ಲಿನ ಮಂಜುಳಾ ಮಹಾಬಲೇಶ್ವರ ಗಡೇರ (35) ದೂರು ನೀಡಿದ್ದಾರೆ.
ಡಿಸೆಂಬರ್ 20ರಂದು ಆರೋಪಿಗಳು ಬಟ್ಟೆ ಹೊಲಿಸುವ ಉದ್ದೇಶದಿಂದ ಮಂಜುಳಾ ಅವರ ಮನೆಗೆ ಬಂದಿದ್ದರು. ಅದೇ ಅವಧಿಯಲ್ಲಿ ಮನೆಯ ಹಾಲ್ ನ ಟಿಪಾಯಿ ಮೇಲಿದ್ದ ₹1,30,000 ಮೌಲ್ಯದ 30ಗ್ರಾಂನ ಎರಡು ಬಂಗಾರದ ಬಳೆಗಳು ಹಾಗೂ ₹15,000 ಮೌಲ್ಯದ ಬಂಗಾರದ ಉಂಗುರವನ್ನು ಕಳ್ಳತನ ಮಾಡಿದ್ದಾರೆ ಎಂದು ಮಂಜುಳಾ ದೂರಿದ್ದಾರೆ. ಪಿ.ಎಸ್.ಐ ಸುಹಾಸ್ ಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಆರೋಪಿಗಳು ಅಂಕೋಲಾದ ಫೈನಾನ್ಸ್ ಒಂದರಲ್ಲಿ ಬಂಗಾರವನ್ನು ಗಿರವಿ ಇಟ್ಟು ಸಾಲ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.



