ಶಾಂತಿ, ಸೌಹಾರ್ದತೆಯ ವಾತಾವರಣ ನಿರ್ಮಾಣದಲ್ಲಿ ಕ್ರೀಡೆಗಳ‌ ಪಾತ್ರ ಬಹುಮುಖ್ಯವಾಗಿದೆ ಆರ್.ವಿ.ದಾನಗೇರಿ

ಜೋಯಿಡಾ : ಕ್ರೀಡೆ ಮನುಷ್ಯನ ಬೆಳವಣಿಗೆಗೆ ಸಹಕಾರಿ. ಶಾಂತಿ, ಸೌಹಾರ್ದತೆಯ ವಾತಾವರಣ ನಿರ್ಮಾಣದಲ್ಲಿ ಕ್ರೀಡೆಗಳ‌ ಪಾತ್ರ ಬಹುಮುಖ್ಯವಾಗಿದೆ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ವಿ.ದಾನಗೇರಿ ಹೇಳಿದರು‌.

ಅವರು ಗುಂದ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಲ್ಲಿ ಕ್ರೀಡಾ ಮನೋಭಾವ ಹೆಚ್ಚಬೇಕೆಂದರೆ ಇಂತಹ ಕ್ರೀಡಾಕೂಟಗಳು ನಡೆಯಬೇಕು. ಗುಂದ ಪ್ರೌಢಶಾಲೆಯ ಮಕ್ಕಳು ಈಗಾಗಲೇ ರಾಷ್ಟ್ರಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ‌ ಊರಿಗೆ ಕೀರ್ತಿಯನ್ನು ತಂದಿದ್ದಾರೆ. ಕಲಿತ ಶಾಲೆ ಮತ್ತು ಕಲಿಸಿದ ಗುರುಗಳಿಗೆ ಗೌರವವನ್ನು ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ‌ ನೀಡಿದರು.

ನಂದಿಗದ್ದಾ ಗ್ರಾಮ ಪಂಚಾಯತ್ ಅಧ್ಯಕ್ಷ ಅರುಣ್ ದೇಸಾಯಿ ಮಾತನಾಡಿ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಅವೆರಡನ್ನು ಸಮಾನ ಚಿತ್ತದಿಂದ ಸ್ವೀಕರಿಸಿ ಮುನ್ನಡೆಯಬೇಕೆಂದು ಕರೆ ನೀಡಿ ಕ್ರೀಡಾಕೂಟಕ್ಕೆ ಶುಭವನ್ನು ಹಾರೈಸಿದರು.

ಶಾಲಾಭಿವೃದ್ಧಿ‌ ಸಮಿತಿಯ ಅಧ್ಯಕ್ಷ ಅನಂತ ದೇಸಾಯಿ ಮಾತ‌ನಾಡಿ ಶಾಲೆಯ ಕುಂದು ಕೊರತೆಗಳ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ಕೊಡುವಂತೆ ವಿನಂತಿಸಿದರು.

ನಂದಿಗದ್ದಾ ಗ್ರಾಮ ಪಂಚಾಯತ್ ವತಿಯಿಂದ ಕ್ರೀಡಾ ಸಾಮಗ್ರಿಗಳನ್ನು ಗುಂದ ಪ್ರೌಢಶಾಲೆಗೆ ಹಸ್ತಾಂತರಿಸಲಾಯ್ತು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರೌಢಶಾಲೆಯ ನಾಲ್ಕು ಶಿಕ್ಷಕರನ್ನು ಹಾಗೂ ಈ ಬಾರಿ ಹರ್ಡಲ್ಸ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಚಿನ್ ಸಾವರ್ಕರ್ ನನ್ನು ಸನ್ಮಾನಿಸಿ ಗೌರವಿಸಲಾಯ್ತು.

ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದಾಕ್ಷಾಯಿಣಿ ದಾನಶೂರ, ಸದಸ್ಯರಾದ ಧವಳೋ ಸಾವರಕರ, ಶೋಭಾ ಎಲ್ಲೆಕರ, ಜೋಯಿಡಾ ಕಾರ್ಯನಿರತ ಪತ್ರಕರ್ತದ ಸಂಘದ ಅಧ್ಯಕ್ಷರಾದ ಸಂದೇಶ್ ದೇಸಾಯಿ, ಶಾಲೆಯ ಮುಖ್ಯ ಶಿಕ್ಷಕ ಜೋಸೆಫ್ ಗೋಸ್ವಾಲಿಸ್, ಹಿರಿಯ ಶಿಕ್ಷಕ ಜನಾರ್ಧನ ಹೆಗಡೆ‌ ಮೊದಲಾದವರು ಉಪಸ್ಥಿತರಿದ್ದರು.