ಭಟ್ಕಳದಲ್ಲಿ ಯುವಕನೊರ್ವ ದಿಢೀರ್ ನಾಪತ್ತೆ

ಭಟ್ಕಳ: ಮನೆಯಲ್ಲಿ ಯಾರಿಗೂ ಹೇಳದ ಯುವಕನೊರ್ವ ದಿಢೀರ್ ನಾಪತ್ತೆಯಾಗಿರುವ ಘಟನೆ ತಿಲಕನಗರದ ಹಡೀನ್ ಸರ್ಪನಕಟ್ಟೆಯಲ್ಲಿ ನಡೆದಿದೆ.

ನಾಪತ್ತೆಯಾದ ಯುವಕನನ್ನು ಮೊಹಮ್ದ ಸುಫೈಲ್ 25 ವರ್ಷ ಎಂದು ತಿಳಿದು ಬಂದಿದೆ. ಈತ ಸರ್ಪನಕಟ್ಟೆಯಲ್ಲಿರುವ ಮಲಬಾರ್ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದವನು. ಮನೆಯಲ್ಲಿ ಯಾರಿಗೂ ಹೇಳದೆ ಡಿಸೆಂಬರ 29ರ ರಾತ್ರಿ 11 ಗಂಟೆಗೆಯಿಂದ ಡಿಸೆಂಬರ 30 ರ ಬೆಳ್ಳಿಗ್ಗೆ 7 ಗಂಟೆಯ ಅವಧಿಯಲ್ಲಿ ಎಲ್ಲಿಯೋ ಹೋಗಿ ನಾಪತ್ತೆಯಾಗಿದ್ದವನು ಈ ವರೆಗೆ ಮನೆಗೆ ಬಾರದೇ ಕಾಣೆಯಾಗಿದ್ದು ಕಾಣೆಯಾದ ಮಗನನ್ನು ಹುಡುಕಿ ಕೊಡುವಂತೆ ಯುವಕನ ತಂದೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ಯುವಕನ ಪತ್ತೆಗೆ ಬಲೆಬಿಸಿದ್ದಾರೆ.