ವಿಜಯಪುರ, ಜ.02: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಅಪಾರ ರಾಮ ಭಕ್ತರು ಮಂದಿರ ಉದ್ಘಾಟನೆಗೆ, ರಾಮ ಮಂದಿರದಲ್ಲಿ ರಾಮನನ್ನ ನೋಡಲು ಕಾತರರಾಗಿದ್ದಾರೆ. ಇದರ ನಡುವೆ ರಾಮಮಂದಿರ ಉದ್ಘಾಟನೆ CM ಆಹ್ವಾನಿಸದ ವಿಚಾರವಾಗಿ ರಾಜಕೀಯ ಜಟಾಪಟಿ ನಡೆಯುತ್ತಿದೆ. ರಾಮ ಮಂದಿರ ಉದ್ಘಾಟನೆಗೆ ಕರೆಯದೇ ಇದ್ದುದ್ದು ಒಳ್ಳೇಯದೇ ಆಯ್ತು. ನಮಗೆ ಸಿದ್ದರಾಮಯ್ಯರೇ ರಾಮ. ರಾಮನನ್ನ ಪೂಜಿಸೋಕೆ ಅಯೋಧ್ಯೆಗೆ ಯಾಕೆ ಹೋಗ್ಬೇಕು. ಅಯೋಧ್ಯೆಯಲ್ಲಿರೋದು ಬಿಜೆಪಿ ರಾಮ ಎಂದು ಕಾಂಗ್ರೆಸ್ನ ಮಾಜಿ ಸಚಿವ ಆಂಜನೇಯ ಹೇಳಿದ್ದರು. ಮತ್ತೊಂದೆಡೆ ಒಬ್ಬ ರಾಜ್ಯದ ಸಿಎಂಗೆ ಆಹ್ವಾನ ನೀಡಿಲ್ಲ ಅಂದ್ರೆ ಹೇಗೆ? ಈ ರೀತಿಯ ರಾಜಕೀಯ ಮಾಡೋದು ಸರಿಯಲ್ಲ. ದೇವರು, ಧರ್ಮದ ಹೆಸರಿನಲ್ಲಿ ರಾಜಕಾರಣ ಸಲ್ಲದು ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸದ್ಯ ಸಿಎಂ ಆಹ್ವಾನ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಷ್ಟನೆ ನೀಡಿದ್ದಾರೆ.
ನನಗೆ ಕರೆಯೋದಲ್ಲ, ಬರಬೇಡಿ ಅಂತ ಹೇಳಿದ್ದಾರೆ
ರಾಮ ಮಂದಿರ ನಿರ್ಮಾಣ ಹಾಗೂ ಆಂಜನೇಯ ಅವರ ಹೇಳಿಕೆ ಸಂಬಂಧ ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿರುವ ಹೆಲಿಪ್ಯಾಡ್ನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆಂಜನೇಯಗೆ ಸದ್ಬುದ್ಧಿ ಬರಲಿ. ಯಾವ ರಾಜ್ಯದ ಬಿಜೆಪಿ ಸಿಎಂಗೂ ಕರೆದಿಲ್ಲ. ನಾನು ಭಾರತ ಸರ್ಕಾರ ಮಂತ್ರಿ ನನ್ನನ್ನು ಕರೆದಿಲ್ಲ. ನನಗೆ ಕರೆಯೋದಲ್ಲ ಬರಬೇಡಿ ಅಂತ ಹೇಳಿದ್ದಾರೆ. ಅಲ್ಲಿ ಜಾಗ ಇಲ್ಲ, ಅಲ್ಲಿನ ವ್ಯವಸ್ಥೆ ಸೀಮಿತವಾಗಿದೆ. ಯಾರನ್ನ ಕರೆಯಬೇಕು, ಕರೆಯಬಾರದು ಅನ್ನೋದು ಶ್ರೀ ರಾಮ ಮಂದಿರ ಕಮಿಟಿಯ ಸ್ವತಂತ್ರ ನಿರ್ಧಾರವಾಗಿರುತ್ತದೆ. ಹೀಗಾಗಿ ರಾಮಮಂದಿರ ಉದ್ಘಾಟನೆಗೆ ಸಿದ್ದರಾಮಯ್ಯಗೆ ಆಹ್ವಾನ ನೀಡಿಲ್ಲ ಎಂದು ಸ್ವಷ್ಟನೆ ನೀಡಿದರು.
ರಾಜ್ಯದಲ್ಲಿ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಕನ್ಫ್ಯೂಸ್ ಆಗಿದೆ. ರಾಮಮಂದಿರ ಆಗಬೇಕು ಅನ್ನೋದು ಇರಲಿಲ್ಲ. ಆಗುತ್ತೆ ಅನ್ನೋ ಕಲ್ಪನೆ ಇರಲಿಲ್ಲ. ಇಚ್ಛೆನೂ ಅವರಿಗೆ ಇರಲಿಲ್ಲ. ಹಾಗಾಗಿ ಒಂದು ರೀತಿಯ ಆತಂಕ ಹೊಟ್ಟೆ ಕಿಚ್ಚು ಆರಂಭವಾಗಿದೆ. ಅದರ ಪರಿಣಾಮ ಉದ್ಘಾಟನೆಗೆ ಹೋಗಬೇಕೋ ಹೋಗಬಾರದೋ ಅನ್ನೋದು ಕನ್ಫ್ಯೂಷನ್. ನಾ ಹೋಗೋದಿಲ್ಲ ಅಂತ ಕೆಲವರು ಹೇಳಿಕೆ ನೀಡಿದ್ದಾರೆ. ರಾಮ ಅನ್ನೋದು ಕಾಲ್ಪನಿಕ ಮತ್ತು ಇದರ ಬಗ್ಗೆ ನಿರ್ಣಯ ಮಾಡಬಾರದು ಅಂತ ಹೇಳಿದರು. ಪ್ರಧಾನಮಂತ್ರಿಗಳು ಉದ್ಘಾಟನೆಗೆ ಯಾಕೆ ಹೋಗುತ್ತಿದ್ದಾರೆ ಅಂತ ಕೇಳುತ್ತಾರೆ. ಇದು ಯಾವುದು ಜನ ಸ್ವೀಕಾರ ಮಾಡಲಿಲ್ಲ ಅಂದ ಮೇಲೆ 35 ವರ್ಷಗಳ ಕೇಸ್ ತೆಗೆದು ಜನರನ್ನ ಬಂಧಿಸುವ ಅತ್ಯಂತ ನೀಚ ಕೆಲಸ ಕಾಂಗ್ರೆಸ್ ಪಾರ್ಟಿ ಕೈ ಹಾಕಿದೆ.
ಸಿದ್ದರಾಮಯ್ಯ ವಿರುದ್ಧ ಜೋಶಿ ಕಿಡಿ
ಅದರಲ್ಲಿ ಒಬ್ಬರು ಪೂಜಾರಿ ಮತ್ತು ಒಬ್ಬರು ಕುಲಕರ್ಣಿ ಅವರನ್ನ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಕುಲಕರ್ಣಿ ಅವರಿಗೆ 72 ವರ್ಷ ಆಗಿದೆ. ರಾಮ ಮಂದಿರ ಆಗಿದ್ದಕ್ಕೆ ಕಾಂಗ್ರೆಸ್ ನವರಿಗೆ ಹೊಟ್ಟೆ ಕಿಚ್ಚು ಆಗುತ್ತಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಕಾನೂನಾತ್ಮಕವಾಗಿ ಹೋರಾಟ ಮಾಡೇ ಮಾಡುತ್ತೇವೆ. ಪಿಎಫ್ಐ ಮತ್ತು ಡಿಜೆ ಹಳ್ಳಿ, ಕೆಜೆ ಮತ್ತು ಹಳೆ ಹುಬ್ಬಳ್ಳಿ ಪೊಲೀಸ್ ಸ್ಟೇಶನ್ ಮೇಲೆ ವ್ಯವಸ್ಥಿತವಾಗಿ ಸಂಚು ನಡೆಸಿ ಹಲ್ಲೆ ಮಾಡಿದರು. ಪೊಲೀಸ್ ಆಫೀಸರ್ ಸತ್ತೋಗುತ್ತಿದ್ದರು ಅಂತ ಚಾರ್ಜ್ ಶೀಟ್ ನಲ್ಲಿತ್ತು. ಅಂತವರನ್ನ ಬಿಡುಗಡೆಗೆ ಕಾಂಗ್ರೆಸ್ ಪಕ್ಷದವರು ಪತ್ರ ಬರೀತಿರಿ. ಈಗ 35 ವರ್ಷದ ಹಿಂದಿನ ಕೇಸ್ ಅದರಲ್ಲಿ ಒಬ್ಬರು ಹೋರಾಟದಲ್ಲಿ ಇರಲಿಲ್ಲ. ಯಾವ ಆಧಾರದಲ್ಲಿ ಬಂಧಿಸುತ್ತೀರಿ? ಸಿದ್ದರಾಮಯ್ಯ ಏನ್ ಮಾಡುತ್ತಿದ್ದೀರಿ? ನೀವೇನು ಮೊಘಲ್ ಸರ್ಕಾರ ನಡೆಸಬೇಕು ಅಂತ ಮಾಡಿದ್ದೀರಾ? ಇಸ್ಲಾಮಿಕ್ ಐಎಸ್ಎಸ್ ಸಂಸ್ಥೆ ರೀತಿ ಸರ್ಕಾರ ನಡೆಸಬೇಕು ಅಂತ ಅಂದುಕೊಂಡಿದ್ದೀರಾ? ನೀವು ಐಎಸ್ಎಸ್ ಅಂತ ಅಂದುಕೊಂಡಿದ್ದೀರಾ ಎಂದು ಪ್ರಹ್ಲಾದ್ ಜೋಶಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರೀತಿ ಆಧಾರಕ್ಕೆ ನೀವು ಈ ಕೆಲಸ ಮಾಡುತ್ತಿದ್ದೀರಾ? ಈ ಮೂಲಕ ಇದಕ್ಕೆ ಪರೋಕ್ಷವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಖುಷಿ ಪಡಿಸುವ ತಂತ್ರ ಇದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಮುಸಲ್ಮಾನರ ಪರವಾಗಿ ಮಾಡಲಿಕ್ಕೆ ರಾಮ ಮಂದಿರ ಕಾರಣದಿಂದ ಹಿಂದೂ ಕನ್ಸಲ್ಟೆಂಟ್ಆಗಬಹುದು ಅನ್ನೋ ಕಾರಣದಿಂದ ಮುಸಲ್ಮಾನರ ಪರವಾಗಿ ತುಷ್ಟಿಕರಣಕ್ಕಾಗಿ ಈ ಕೆಲಸ ಮಾಡಿದ್ದಾರೆ. ಐಎಸ್ ಐಎಸ್ ಸರ್ಕಾರ ಅಂತ ಅವರು ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.