ಕಾರು ಡಿಕ್ಕಿ: ಸ್ಥಳದಲ್ಲಿಯೇ ಮೃತಪಟ್ಟ ಮಹಿಳೆ


ಅಂಕೋಲಾ: ರಸ್ತೆಯ ಅಂಚಿಗೆ ಸಂಚರಿಸುತ್ತಿದ್ದ ವೇಳೆಯಲ್ಲಿ ಕಾರು ಡಿಕ್ಕಿ ಹೊಡೆದು ಮಹಿಳೆ ಓರ್ವರು ಸ್ಥಳದಲ್ಲಿಯೇ ಮೃತ ಘಟನೆ ತಾಲ್ಲೂಕಿನ ಅವರ್ಸಾ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.

ಇಲ್ಲಿನ ಡೊಂಗ್ರಿ ಗ್ರಾಮ ಪಂಚಾಯತಿಯ ಹೆಗ್ಗರಣಿ ನಿವಾಸಿ ದೀಪಾ ಅಶೋಕ ನಾಯ್ಕ (55) ಮೃತ ಮಹಿಳೆಯಾಗಿದ್ದಾರೆ. ಅವರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಗೋವಾದಿಂದ ಅಂಕೋಲಾ ಮಾರ್ಗವಾಗಿ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದೀಪಾ ಅವರ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುವುದ್ದಾರೆ.
ಕಾರು ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಿಸಿದ್ದರಿಂದ ಅಪಘಾತಕ್ಕೆ ಕಾರಣವಾಗಿದೆ. ಮಹಿಳೆಗೆ ಡಿಕ್ಕಿ ಹೊಡೆದ ಕಾರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಪಾದಚಾರಿ ಮಾರ್ಗವನ್ನು ದಾಟಿ ಅಂಚಿನ ಜಮೀನಿಗೆ ಬಿದ್ದಿದ್ದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಕಾರಿನಲ್ಲಿದ್ದವರು ಗೋವಾದಿಂದ ಗೋಕರ್ಣಕ್ಕೆ ಪ್ರವಾಸ ನಿಮಿತ್ತ ತೆರಳುತ್ತಿದ್ದರು ಎನ್ನಲಾಗಿದೆ.