ಜ.4ರಿಂದ 6ರವರೆಗೆ ವಾಸರೆಯ ಶ್ರೀ ಬೀರದೇವರ ಪ್ರತಿಷ್ಠಾ ಕಾರ್ಯಕ್ರಮ


ಅಂಕೋಲಾ :
ತಾಲ್ಲೂಕಿನ ವಾಸರೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವರ ಪರಿವಾರ ದೇವ ಶ್ರೀ ಬೀರದೇವರ ನೂತನ ಪ್ರಸಾದ ಗರ್ಭದಲ್ಲಿ ಬಿಂಬಪ್ರತಿಷ್ಠಾ ಕಾರ್ಯಕ್ರಮ ಜನವರಿ 4ರಿಂದ 6ರವರೆಗೆ ನಡೆಯಲಿದೆ.
4-1-2024ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, 5-1-2024ರಂದು ಬೆಳಿಗ್ಗೆ 9.23ಕ್ಕೆ ಶ್ರೀ ಬೀರ ದೇವರ ಪ್ರತಿಷ್ಠಾ ಹಾಗೂ ಕಲಶ ಪ್ರತಿಷ್ಠಾನ ನಡೆಯಲಿದೆ. 6-1-2024ರಂದು ಧಾರ್ಮಿಕ ಕಾರ್ಯಕ್ರಮಗಳು, ಮಹಾಪೂಜೆಯ ನಂತರ ಮಧ್ಯಾಹ್ನ 1.30ರಿಂದ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಶ್ರೀ ಶಾಂತಿಕಾ ಪರಮೇಶ್ವರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.