ಕಾರವಾರ : ಕಾರವಾರದ ಬಿಜೆಪಿ ಕಾರ್ಯಾಲಯದಲ್ಲಿ ಭಾರತದ ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದಂದು ವಾಜಪೇಯಿ ಅವರ ಭಾವಚಿತ್ರಕ್ಕೆ ಕಾರವಾರ-ಅಂಕೋಲಾ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಪುಷ್ಪನಮನ ಸಲ್ಲಿಸಿದ್ರು…
ಬಳಿಕ ಮಾತನಾಡಿದ ನಿಕಟ ಪೂರ್ವ ಶಾಸಕಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ್, ವಾಜಪೇಯಿಯವರು ಪಕ್ಷ ಸಂಘಟನೆ, ಹಾಗೂ ಅಭಿವೃದ್ಧಿಯ ಹರಿಕಾರರಾಗಿದ್ರು. ಅವ್ರೇನು ಯೋಜನೆಗಳು ಹಾಕಿಕೊಂಡಿದ್ದರೋ ಅದು ಇಂದಿಗೆ ಪೂರ್ತಿಗೊಳ್ತಾ ಇದೆ. ಸನ್ಮಾನ್ಯ ಮೋದೀಜಿ ಯವರು ಅನೇಕ ಯೋಜನೆಗಳನ್ನು ದೇಶದ ಜನರಿಗೆ ನೀಡಿದ್ದಾರೆ. ಪಕ್ಷದ ಸಂಘಟನೆ ಬಹು ಮುಖ್ಯ. ಇಂದು ಪಕ್ಷ ನನಗೆ ಬಹುಮುಖ್ಯ ಜವಾಬ್ದಾರಿ ನೀಡಿದೆ. ಅದನ್ನ ನಾನು ನಿಭಾಯಿಸಿಕೊಂಡು ಹೋಗುತ್ತೇನೆ. ಇದರಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮವಿದೆ ಎಂದು ಹೇಳಿದ್ರು.
ರಾಜ್ಯ ಮಟ್ಟದಲ್ಲಿ ಉಪಾಧ್ಯಕ್ಷೆ ಸ್ಥಾನಮಾನ ಸಿಗಲು ಸನ್ಮಾನ್ಯ ಮೋದಿಜಿ, ನಡ್ದಾ ಜಿ, ಅಮಿತ್ ಶಾ ಜಿ, ಯಡಿಯೂರಪ್ಪ ಜಿ, ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಸರ್, ಸಂಸದ ಅನಂತ ಕುಮಾರ್ ಹೆಗ್ಡೆ, ಜಿಲ್ಲಾಧ್ಯಕ್ಷರು ವೆಂಕಟೇಶ್ ನಾಯಕ, ಹಾಗೂ ಸಮಸ್ತ ಕಾರ್ಯಕರ್ತರು ಇದಕ್ಕೆ ಕಾರಣಿಕರ್ತರು ಎಂದು ಹೇಳಿದ್ರ..ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಅಭ್ಯರ್ಥಿ ಯಾರೇ ಆಗಿರಲಿ ಪಕ್ಷದ ಚಿನ್ಹೆಯ ಅಡಿಯಲ್ಲಿ ನಾವೆಲ್ಲರೂ ದುಡಿಯೋಣ ಸನ್ಮಾನ್ಯ ಮೋದಿಜಿಯವರನ್ನು ಮತ್ತೋಮ್ಮೆ ಪ್ರಧಾನಿಯನ್ನಾಗಿ ಮಾಡೋಣ. ನನ್ನ ಉಸಿರಿರುವ ತನಕ ನಾನು ಬಿಜೆಪಿಯಲ್ಲಿ ದುಡಿಯುತ್ತೇನೆ ಎಂದು ಹೇಳಿದ್ರು…
ನಗರ ಹಾಗೂ ಗ್ರಾಮೀಣ ಭಾಗದ ಕಾರ್ಯಕರ್ತರು ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ ಅವರನ್ನು ಈ ವೇಳೆ ಅಭಿನಂದಿಸಿದ್ರು. ಮುಂದಿನ ದಿನಗಳಲ್ಲಿ ವಿಶೇಷ ಸ್ಥಾನಮಾನ ಸಿಗಲಿ ಎಂದು ಶುಭ ಹಾರೈಸಿದ್ರು. ಈ ವೇಳೆ ರೂಪಾಲಿ ನಾಯ್ಕ್ ಅವರು ತುಂಬಾ ಭಾವುಕರಾದ್ರು..
ಅಧ್ಯಕ್ಷ ನಾಗೇಶ್ ಕುರ್ಡೇಕರ್ ಸ್ವಾಗತಿಸಿದ್ರು. ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ ಪಕ್ಷದ ಗೀತೆ ಹಾಡಿದ್ರು. ಜಿಲ್ಲಾ ವಿಶೇಷ ಆಹ್ವಾನಿತರು ಮನೋಜ್ ಭಟ್, ಮನೋಜ್ ಭಾಂದೇ ಕರ್, ಸಂಜಯ್ ಸಾಲೂನಕೆ, ಮಾಲಾ ಹುಲ ಸ್ವಾರ್, ವಾಜಪೇಯಿಯವರ ಸಾಧನೆಗಳ ಬಗ್ಗೆ ಮಾತನಾಡಿದ್ರು.
ಈ ವೇಳೆ ಸಾಮಾಜಿಕ ಜಾಲತಾಣದ ಕಿಶನ್ ಕಾಂಬ್ಳೆ, ಬಿಜೆಪಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ರು..