ಕಲಬುರಗಿಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆಗೈದು, ಶವ ಸುಟ್ಟ ಆರೋಪಿಗಳ ಬಂಧನ

ಕಲಬುರಗಿ, ಡಿಸೆಂಬರ್​ 26: ಚಿತ್ತಾಪುರ ಪಟ್ಟಣದಲ್ಲಿ ಯುವಕನನ್ನು ಬರ್ಬರವಾಗಿ ಕೊಲೆಗೈದು ಶವ ಸುಟ್ಟ ಪ್ರಕರಣದ ಆರೋಪಿಗಳನ್ನು ಚಿತ್ತಾಪುರ ಪೊಲೀಸರು ಬಂಧಿಸಿದ್ದಾರೆ. ಆಸಿಫ್, ಬಾಬುಮೀಯಾ, ಅಲ್ತಾಫಶಾ, ಮಹ್ಮದ್ ಕೈಫ್ ಬಂಧಿತ ಆರೋಪಿಗಳು. ಆರೋಪಿಗಳು ಡಿಸೆಂಬರ್​ 23 ರಂದು ದಾವಲಸಾಬ್ ಎಂಬುವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದರು. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಶವ ಸುಟ್ಟು ಹಾಕಿದ್ದರು.

ಮೃತ ದಾವಲ್‌ಸಾಬ್ ಆರೋಪಿ ಆಸಿಫ್ ಸಹೋದರಿಯನ್ನ ಚುಡಾಯಿಸುತ್ತಿದ್ದನು. ಈ ಬಗ್ಗೆ ಸಾಕಷ್ಟು ಆರೋಪಿ ಆಸಿಫ್ ಮೃತ ದಾವಲ್‌ಸಾಬ್​ಗೆ ಬುದ್ಧಿವಾದ ಹೇಳಿದ್ದನು. ಆದರೂ ಕೂಡ ದಾವಲ್​ಸಾಬ್​​ ಚುಡಾಯಿಸುತ್ತಿದ್ದನ್ನು ಬಿಟ್ಟಿರಲಿಲ್ಲ. ಆ ಹಿನ್ನಲೆ ಉಪಾಯದಿಂದ ದಾವಲ್​​ಸಾಬ್​​​ನನ್ನು ಕರೆಯಿಸಿ ಹಂತಕರು ಕೊಲೆ ಮಾಡಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಚಂದ್ರಶೇಖರ್ ತಿಗಡಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿದೆ.