ದಾಂಡೇಲಿಯಲ್ಲಿ ಭರದಿಂದ ಸಾಗಿದ ಕರ್ಕಾ-ಹಾಲಮಡ್ಡಿ ರಸ್ತೆ ಕಾಮಗಾರಿ-ಜನತೆಯ ಬೇಡಿಕೆಗೆರ ಸ್ಪಂದಿಸಿದ ಆರ್.‌ವಿ ದೇಶಪಾಂಡೆ

ದಾಂಡೇಲಿ : ಕಳೆದ ಆರೇಳು ತಿಂಗಳಿನಿಂದ ದಾಂಡೇಲಿ – ಹಳಿಯಾಳ ಹೆದ್ದಾರಿಯಲ್ಲಿ ಬರುವ ಕರ್ಕಾದಿಂದ ಹಾಲಮಡ್ಡಿಯವರೆಗೆ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಹೊಂಡ – ಗುಂಡಿಗಳಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು. ರಸ್ತೆ ದುರಸ್ತಿಗಾಗಿ ಹಾಗೂ ಡಾಂಬರೀಕರಣಕ್ಕಾಗಿ ಶಾಸಕ ಆರ್.ವಿ.ದೇಶಪಾಂಡೆಯವರಿಗೆ ಮನವಿ ಮಾಡಲಾಗಿತ್ತು.

ಜನತೆಯ ಮನವಿಗೆ ಸ್ಪಂದಿಸಿದ ಆರ್.ವಿ.ದೇಶಪಾಂಡೆಯವರು ಕರ್ಕಾದಿಂದ ಹಾಲಮಡ್ಡಿಯವರಿಗೆ ರಸ್ತೆ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಅನುದಾನವನ್ನು ಮಂಜೂರು ಮಾಡಿಸಿ ಲೋಕೊಪಯೋಗಿ ಇಲಾಖೆಯ ಮೂಲಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಿದ್ದಾರೆ. ಕಳೆದ ಏಳೆಂಟು ದಿನಗಳಿಂದ ಪ್ರಥಮವಾಗಿ ರಸ್ತೆಯಲ್ಲಿದ್ದ ಹೊಂಡ – ಗುಂಡಿಗಳನ್ನು ಮುಚ್ಚಿ ಆನಂತರ ಡಾಂಬರೀಕರಣ ಹಾಕುವ ಕಾಮಗಾರಿಯನ್ನು ನಡೆಸಲಾಗಿದೆ. ಒಂದನೇ ಹಂತದ ಡಾಂಬರೀಕರಣ ಕಾರ್ಯ ಮುಗಿಸಿ ಎರಡನೇ ಹಂತದ ಡಾಂಬರೀಕರಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಒಟ್ಟಿನಲ್ಲಿ ಭಾನುವಾರವು ರಸ್ತೆ ದುರಸ್ತಿ ಕಾಮಗಾರಿ ಭರದಿಂದ ಸಾಗುತ್ತಿದೆ