ಐಪಿಎಲ್ 2024 ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ದುಬೈನ ಕೋಕಾಕೋಲಾ ಅರೆನಾದಲ್ಲಿ ಇಂದು ನಡೆಯಲಿರುವ ಆಕ್ಷನ್ನಲ್ಲಿ ಒಟ್ಟು 333 ಆಟಗಾರರು ಭಾಗವಹಿಸಲಿದ್ದಾರೆ. ಆದರೆ ಈ ಪೈಕಿ 77 ಆಟಗಾರರಿಗೆ ಮಾತ್ರ ಹರಾಜಾಗಲಿದ್ದಾರೆ. ಅಂದರೆ 10 ತಂಡಗಳಲ್ಲಿ 77 ಸ್ಲಾಟ್‌ಗಳು ಮಾತ್ರ ಖಾಲಿ ಇವೆ. ಆದ್ದರಿಂದ, ಒಂದು ತಂಡವು ಎಷ್ಟು ಆಟಗಾರರನ್ನು ಖರೀದಿಸಬಹುದು ಎಂಬ ಸಂಪೂರ್ಣ ವಿವರಗಳನ್ನು ಈಗ ನೋಡೋಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ): ಆರ್‌ಸಿಬಿ ತಂಡ ಈ ಬಾರಿ ಒಟ್ಟು 6 ಆಟಗಾರರನ್ನು ಖರೀದಿಸುವ ಅವಕಾಶ ಮಾತ್ರ ಹೊಂದಿದೆ. ಈ ಆರು ಸ್ಲಾಟ್‌ಗಳಲ್ಲಿ 3 ವಿದೇಶಿ ಮತ್ತು 3 ಭಾರತೀಯ ಆಟಗಾರರನ್ನು ಹರಾಜಿನಲ್ಲಿ ಪಡೆದುಕೊಳ್ಳಬಹುದು. ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಹರಾಜಿನಲ್ಲಿ ಒಟ್ಟು ಆರು ಆಟಗಾರರನ್ನು ಖರೀದಿಸಬಹುದು. ಈ ಪೈಕಿ ಮೂವರು ವಿದೇಶಿ ಆಟಗಾರರು ಮತ್ತು ಮೂವರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಬಹುದು.
ಗುಜರಾತ್ ಟೈಟಾನ್ಸ್ ಒಟ್ಟು 8 ಆಟಗಾರರನ್ನು ಖರೀದಿಸುವ ಅವಕಾಶಹೊಂದಿದೆ. ಇದರಲ್ಲಿ 6 ಭಾರತೀಯ ಮತ್ತು 2 ವಿದೇಶಿ ಆಟಗಾರರನ್ನು ಖರೀದಿಸಬಹುದು. ಅಂತೆಯೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಖಾಲಿ ಇರುವ ಸ್ಲಾಟ್‌ಗಳ ಸಂಖ್ಯೆ 12. ಈ ಸ್ಥಾನಗಳಲ್ಲಿ 8 ಭಾರತೀಯರು ಮತ್ತು 4 ವಿದೇಶಿ ಆಟಗಾರರನ್ನು ಖರೀದಿಸಬಹುದು.
ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ 6 ಸ್ಲಾಟ್‌ಗಳು ಖಾಲಿ ಇವೆ. ಈ ಸ್ಲಾಟ್‌ಗಳಲ್ಲಿ ಮೂವರು ಭಾರತೀಯರು ಮತ್ತು ಮೂವರು ವಿದೇಶಿ ಆಟಗಾರರನ್ನು ಖರೀದಿಸಬಹುದು. ಮುಂಬೈ ಇಂಡಿಯನ್ಸ್ ತಂಡವು ಒಟ್ಟು 8 ಸ್ಲಾಟ್‌ಗಳನ್ನು ಹೊಂದಿದೆ. ಇದರಲ್ಲಿ ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಒಟ್ಟು 6 ಸ್ಲಾಟ್‌ಗಳು ಖಾಲಿ ಇವೆ. ಈ ಸ್ಥಾನಗಳಲ್ಲಿ ನಾಲ್ವರು ಭಾರತೀಯ ಆಟಗಾರರು ಮತ್ತು ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದು. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಖಾಲಿ ಇರುವ ಸ್ಲಾಟ್‌ಗಳ ಸಂಖ್ಯೆ 8. ಮೂವರು ವಿದೇಶಿ ಆಟಗಾರರು ಮತ್ತು ಐವರು ಭಾರತೀಯ ಆಟಗಾರರಿಗೆ ಅವಕಾಶ ನೀಡಬಹುದು.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 9 ಸ್ಲಾಟ್‌ಗಳನ್ನು ಹೊಂದಿದೆ. ಈ ಪೈಕಿ 4 ವಿದೇಶಿ ಮತ್ತು 5 ಭಾರತೀಯ ಆಟಗಾರರನ್ನು ಖರೀದಿಸಬಹುದು. ಪಂಜಾಬ್ ಕಿಂಗ್ಸ್ ತಂಡದಲ್ಲಿ ಒಟ್ಟು 8 ಸ್ಥಾನಗಳು ಖಾಲಿ ಇವೆ. ಈ ಸ್ಲಾಟ್‌ಗಳಲ್ಲಿ 2 ವಿದೇಶಿ ಮತ್ತು 6 ಭಾರತೀಯ ಆಟಗಾರರನ್ನು ಖರೀದಿಸಬಹುದು.