ಉಡುಪಿ, ಡಿ.17: ಪರವಾನಗಿ ಇಲ್ಲದ ಲ್ಯಾಬ್, ಕ್ಲಿನಿಕ್ಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಈ ವೇಳೆ ತಾನು ವೈದ್ಯನೆಂದು ಹೇಳಿಕೊಂಡು ಬ್ರಹ್ಮಾವರ ತಾಲೂಕಿನ ಕಂಬಳಗದ್ದೆ ಕ್ರಾಸ್ನ ಕುಂಜಾಲಿನಲ್ಲಿ ಕ್ಲಿನಿಕ್ ಇಟ್ಟುಕೊಂಡು ಆಯುರ್ವೇದಿಕ್, ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ಬಿಕಾಂ ಪದವೀಧರನೊಬ್ಬ ಸಿಕ್ಕಿಬಿದ್ದಿದ್ದಾನೆ.
ಬಿಕಾಂ ಪದವಿ ಪಡೆದಿರುವ ಸಂದೇಶ್ ರಾವ್ ಕುಂಜಾಲಿನಲ್ಲಿ ಶ್ರೀಸೂರ್ಯನಾರಾಯಣ ಸ್ವಾಮಿ ಹೆಸರಿನ ಆಯುರ್ವೇದಿಕ್ ಕೇಂದ್ರ ತೆರೆದು ಚಿಕಿತ್ಸೆ ನೀಡುತ್ತಿದ್ದನು. ಈ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದಾಗ ಸಂದೇಶ್ ರಾವ್ ವೈದ್ಯನಲ್ಲ, ಆತ ನಕಲಿ ವೈದ್ಯ ಎಂದು ತಿಳಿದುಬಂದಿದೆ. ಸದ್ಯ, ಕ್ಲಿನಿಕ್ ಜಪ್ತಿ ಮಾಡಿದ ಆರೋಗ್ಯಾಧಿಕಾರಿಗಳು, ಆರೋಪಿ ವಿರುದ್ಧ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.