ಪ್ರಧಾನಿ ಮೋದಿಗೆ 2014ರಿಂದ ಇಲ್ಲಿಯವರೆಗೆ 14 ದೇಶಗಳು ನೀಡಿರುವ ಅತ್ಯುನ್ನತ ಪ್ರಶಸ್ತಿಗಳಿವು

ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಇಡೀ ವಿಶ್ವಕ್ಕೇ ಹಬ್ಬಿದೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಅವರನ್ನು ಅತ್ಯಂತ ಜನಪ್ರಿಯ ನಾಯಕ ಎಂದು ಘೋಷಿಸಲಾಗಿದೆ. ಅಷ್ಟೇ ಅಲ್ಲ, ಹಲವು ದೇಶಗಳು ತಮ್ಮ ಅತ್ಯುನ್ನತ ಪ್ರಶಸ್ತಿ ಗಳನ್ನು ನೀಡಿ ಗೌರವಿಸಿವೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಗುರುವಾರ ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಅವರ ನಾಯಕತ್ವಕ್ಕಾಗಿ 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಲಾಗಿದೆ ಎಂದಿದ್ದಾರೆ.

ಈ ದೇಶಗಳು ಪಿಎಂ ಮೋದಿಗೆ ಈ ಪ್ರಶಸ್ತಿಗಳನ್ನು ನೀಡಿವೆ 1:ಅಫ್ಘಾನಿಸ್ತಾನ: ಸ್ಟೇಟ್ ಆರ್ಡರ್ ಆಫ್ ಘಾಜಿ ಆಮಿರ್ ಅಮಾನುಲ್ಲಾ ಖಾನ್– 2016ರಲ್ಲಿ ಅಫ್ಘಾನಿಸ್ತಾನದ ಈ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಧಾನಿ ಮೋದಿಗೆ ದೊರತಿದೆ..

2. ಸೌದಿ ಅರೇಬಿಯಾ  ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್– 2016ರಲ್ಲಿ ಸೌದಿ ಅರೇಬಿಯಾದ ಮುಸ್ಲಿಮೇತರರಿಗೆ ಕೊಡಲಾಗುವ ಅತ್ಯುನ್ನತ ಗೌರವ ನರೇಂದ್ರ ಮೋದಿಗೆ ಸಿಕ್ಕಿದೆ.

3.ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲಸ್ಟೀನ್ ಅವಾರ್ಡ್: 2018ರಲ್ಲಿ ಮೋದಿಗೆ ಈ ಪ್ರಶಸ್ತಿ ಲಭ್ಯವಾಗಿತ್ತು.

3.ಯುನೈಟೆಡ್ ನೇಷನ್ಸ್​: 2018ರಲ್ಲಿ ಯುಎನ್ ಚಾಂಪಿಯನ್ ಆಫ್​ ದಿ ಅರ್ಥ್​ ಅವಾರ್ಡ್​ ನೀಡಿ ಗೌರವಿಸಿತು.

ಯುಕ್ತ ಅರಬ್ ಸಂಸ್ಥಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ 2019ರಲ್ಲಿ ನರೇಂದ್ರ ಮೋದಿ ಅವರಿಗೆ ಲಭಿಸಿದೆ.

5.ರಷ್ಯಾ: ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಅವಾರ್ಡ್ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಇದು 2019ರಲ್ಲಿ ಮೋದಿಗೆ ಲಭಿಸಿದೆ.

6.ಮಾಲ್ಡೀವ್ಸ್: ಆರ್ಡರ್ ಆಫ್ ದಿ ಡಿಸ್ಟಿಂಗ್ಯುಶ್ಡ್ ರೂಲ್ ಅಫ್ ನಿಶಾನ್ ಇಜ್ಜುದ್ದೀನ್ ಮೋದಿಗೆ 2019ರಲ್ಲಿ ದೊರೆತಿತ್ತು.

7.ಬಹರೇನ್: 2019ರಲ್ಲಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್ ಲಭಿಸಿತ್ತು.

8.ಅಮೆರಿಕ: ಲೆಜಿಯನ್ ಆಫ್ ಮೆರಿಟ್: 2020ರಲ್ಲಿ ಮೋದಿಗೆ ಇಂಥದ್ದೊಂದು ಅಪೂರ್ವ ಪ್ರಶಸ್ತಿ ಸಿಕ್ಕಿತ್ತು.

9.ಆರ್ಡರ್ ಆಫ್​ ದಿ ಡ್ರ್ಯಾಗನ್ ಕಿಂಗ್​: 2021ರಲ್ಲಿ ಭೂತಾನ್ ಈ ಪ್ರಶಸ್ತಿ ನೀಡಿತ್ತು.

10: ಆರ್ಡರ್ ಆಫ್​ ಫಿಜಿ: 2023 ಮೇ ತಿಂಗಳಲ್ಲಿ ಮೋದಿಗೆ ಈ ಗೌರವ ದೊರೆತಿತ್ತು.

11.ಪಪುವಾ ನ್ಯೂಗಿನಿಯಾ: ಕಂಪೇನಿಯನ್ ಆಫ್ ದಿ ಆರ್ಡರ್ ಆಫ್ ಲೋಗೋಹು ಇದು ಆ ದೇಶದ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾಗಿದೆ.

12.ಆರ್ಡರ್ ಆಫ್​ ನೈಲ್​: 2023ರಲ್ಲಿ ಈಜಿಪ್ಟ್​ ನೀಡಿತ್ತು.

13: ಗ್ರ್ಯಾಂಡ್​ ಕ್ರಾಸ್ಆಫ್ ಲೀಜನ್ ಆಫ್ ಆನರ್​-2023ರ ಜುಲೈನಲ್ಲಿ ಫ್ರ್ಯಾನ್ಸ್​ ಈ ಪ್ರಶಸ್ತಿಯನ್ನು ಮೋದಿಗೆ ನೀಡಿತ್ತು.

14: ಗ್ರ್ಯಾಂಡ್​ ಕ್ರಾಸ್​ ಆಫ್​ ದಿ ಆರ್ಡರ್ ಆಫ್ ಆನ್​ 2023ರ ಆಗಸ್ಟ್​ನಲ್ಲಿ ಗ್ರೀಸ್​ ನೀಡಿತ್ತು.