ಚಿಕ್ಕಬಳ್ಳಾಪುರ: ಚಲಿಸುವ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿ ಸಾವು

ಚಿಕ್ಕಬಳ್ಳಾಪುರ, ಡಿ.15: ಚಲಿಸುವ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿ ಗಳು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಫುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಮ್ಮನ ಕೆರೆಯಂಗಳದಲ್ಲಿ ನಡೆದಿದೆ. ಕುರಿಗಾಯಿ ಕೂದಲಮ್ಮಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು-ಕೋಲಾರ ಮಾರ್ಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಈ ದುರ್ಘಟನೆ ನಡೆದಿದೆ. ಹುಸಹುಡ್ಯಾ ನಿವಾಸಿಗಳಾದ ಆಂಜಿನಮ್ಮ, ಕೂದಲಪ್ಪ, ಶಶಿಕಲಾ ಹಾಗೂ ನಾರಾಯಣಸ್ವಾಮಿಗೆ ಸೇರಿದ ಕುರಿಗಳು ಇದಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..