ತೆಲಂಗಾಣ: ಮುಂದಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ? ಇಂದು ರಾತ್ರಿ ನೂತನ ಸಿಎಂ ಪ್ರಮಾಣವಚನ ಸ್ವೀಕಾರ

ಹೈದರಾಬಾದ್: 2000ನೇ ಇಸವಿಯಲ್ಲಿ ಕೇವಲ 31ರ ಹರೆಯದ ಅನುಮುಲ ರೇವಂತ್ ರೆಡ್ಡಿ ಅವರು ತಮ್ಮ ಆತ್ಮೀಯ ಗೆಳೆಯರೊಬ್ಬರ ಬಳಿ ‘ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತೇನೆ’ ಎಂದು ಹೇಳಿದ್ದರು. ಆ ಸಮಯದಲ್ಲಿ ಅವರು ಯಾವುದೇ ರಾಜಕೀಯ ಪಕ್ಷದಲ್ಲಿ ಇರಲಿಲ್ಲ. ಅವರು ಕೆಲವೇ ತಿಂಗಳುಗಳ ಹಿಂದೆ, ಹೈದರಾಬಾದ್‌ನ ಪ್ರತಿಷ್ಠಿತ ಜುಬಿಲಿ ಹಿಲ್ಸ್ ಸಹಕಾರಿ ಹೌಸಿಂಗ್ ಸೊಸೈಟಿ ಚುನಾವಣೆ ಗೆದ್ದಿದ್ದರು. ಆಗ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ರೇವಂತ್ ರೆಡ್ಡಿ ಅವರ ಗೆಳೆಯರೊಬ್ಬರು “ರೇವಂತ್ ಯುವಕ, ಉತ್ಸಾಹಿ ಮತ್ತು ಮಹತ್ವಾಕಾಂಕ್ಷೆಯುಳ್ಳವರಾಗಿದ್ದರು. ಅವರು ಹೇಳಿದ್ದು ಸ್ವಲ್ಪ ಅತಿ ಎಂದು ತೋರುತ್ತದೆಯಾದರೂ, ನನಗೆ ಆಶ್ಚರ್ಯವಾಗಲಿಲ್ಲಎಂದಿದ್ದಾರೆ.

ಎರಡು ದಶಕಗಳ ನಂತರ ಅವರ ಮಾತು ‘ಅತಿ ಆಗಿತ್ತು ಎಂದು ಅನಿಸುತ್ತಿಲ್ಲ. ವಾಸ್ತವವಾಗಿ ಇದು ಅವರ ರಾಜಕೀಯ ಪಥವನ್ನು ವಿವರಿಸುತ್ತದೆ. ಇದು ರೇವಂತ್ ಅವರಿಗೆ ಸುಲಭದ ಸಂಗತಿ ಆಗಿರಲಿಲ್. ರೇವಂತ್ ಕಲ್ವಕುರ್ತಿ ವಿಧಾನಸಭಾ ಕ್ಷೇತ್ರದ ಕೊಂಡರೆಡ್ಡಿಪಲ್ಲಿಯವರು. ನವೆಂಬರ್ 8, 1969 ರಂದು ನರಸುಮ ರೆಡ್ಡಿ ಮತ್ತು ರಾಮಚಂದ್ರಮ್ಮ ಎಂಬ ಕೃಷಿ ಕುಟುಂಬಕ್ಕೆ ಜನಿಸಿದ ರೇವಂತ್, ಸಹೋದರಿ ಸೇರಿದಂತೆ ಏಳು ಒಡಹುಟ್ಟಿದವರ ಪೈಕಿ ನಾಲ್ಕನೆಯವರಾಗಿದ್ದರು. ಅವರ ಕುಟುಂಬದವರು ಯಾರೂ ರಾಜಕೀಯದಲ್ಲಿ ಇರಲಿಲ್ಲ.

ಕಲ್ವಕುರ್ತಿಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದ ಅವರು 1992 ರಲ್ಲಿ ಹೈದರಾಬಾದ್‌ನ AV ಕಾಲೇಜಿನಲ್ಲಿ ಲಲಿತಕಲೆಯಲ್ಲಿ ಪದವಿ ಪಡೆದರು. ಅವರ ಕಾಲೇಜು ದಿನಗಳಲ್ಲಿ, ಅವರು ಬಿಜೆಪಿಯ ವಿದ್ಯಾರ್ಥಿ ಘಟಕವಾದ ABVP ಯೊಂದಿಗೆ ಸಂಬಂಧ ಹೊಂದಿದ್ದರು. ಮೇ 7, 1992 ರಂದು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಎಸ್ ಜೈಪಾಲ್ ರೆಡ್ಡಿ ಅವರ ಸೋದರ ಸೊಸೆ, ರಾಜಕೀಯ ಮತ್ತು ವ್ಯಾಪಾರ ವಲಯಗಳಲ್ಲಿ ಪ್ರಸಿದ್ಧ ಮುಖ ಪದ್ಮಾ ರೆಡ್ಡಿ ಅವರ ಪುತ್ರಿ ಗೀತಾ ರೆಡ್ಡಿ ಅವರನ್ನು ವಿವಾಹವಾದರು. ಒಂದು ಕುತೂಹಲಕಾರಿ ಸಂಗತಿಯೆಂದರೆ ಆತ್ಮೀಯ ಸ್ನೇಹಿತ ಮತ್ತು ರೂಮ್‌ಮೇಟ್, ಈಗ ಹಿರಿಯ ಆರ್‌ಎಸ್‌ಎಸ್ ವ್ಯಕ್ತಿಯೇ ಆಗ ರೇವಂತ್ ರೆಡ್ಡಿ-ಗೀತಾ ಪರಿಣಯಕ್ಕೆ ಸಹಾಯ ಮಾಡಿದ್ದು.

ಈ ಸಮಯದಲ್ಲಿ, ರೇವಂತ್, ಜಾಹೀರಾತು ಮತ್ತು ಮುದ್ರಣ ಏಜೆನ್ಸಿಯನ್ನು ಆರಂಭಿಸಿ ನಾಲ್ಕು ವರ್ಷಗಳಲ್ಲಿ, ಹೈದರಾಬಾದ್ ಐಟಿ ಕೇಂದ್ರವಾಗಿ ಬೆಳೆಯಲು ಪ್ರಾರಂಭಿಸುವ ಸಮಯದಲ್ಲಿ ರಿಯಲ್ ಎಸ್ಟೇಟ್‌ಗೆ ಪ್ರವೇಶಿಸಿದರು. ಅಂದಿನಿಂದ ಅವರು ಹಿಂತಿರುಗಿ ನೋಡಲೇ ಇಲ್ಲ. ಅವರು ಜುಬಿಲಿ ಹಿಲ್ಸ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ನಿರ್ದೇಶಕರಾಗಿ ಮತ್ತು ಎರಡು ಬಾರಿ ಅದರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಯಾಗಿ ಆಯ್ಕೆಯಾದರು.

2002 ರಲ್ಲಿ, ರೇವಂತ್ ಮತ್ತು ಪ್ರಸ್ತುತ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು ಪ್ರತ್ಯೇಕ ತೆಲಂಗಾಣ ಆಂದೋಲನವನ್ನು ಪ್ರಾರಂಭಿಸುವುದರೊಂದಿಗೆ ಸ್ನೇಹ ಬೆಳೆಸಿದರು. ಅವರು ಕೆಸಿಆರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. 2004 ರಲ್ಲಿ ಕಲ್ವಕುರ್ತಿ ವಿಧಾನಸಭೆ ಟಿಕೆಟ್ ನಿರೀಕ್ಷಿಸಿದ್ದರು, ಅಲ್ಲಿ ಆಗಿನ ಟಿಆರ್ಎಸ್ (ಈಗ ಬಿಆರ್ಎಸ್) ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಕೊನೆ ಗಳಿಗೆಯಲ್ಲಿ ಜೈಪಾಲ್ ರೆಡ್ಡಿ ಅವರ ಆಪ್ತ ಅನುಯಾಯಿ ಯಡಂ ಕಿಸ್ತಾ ರೆಡ್ಡಿಗೆ ಟಿಕೆಟ್ ಹಂಚಿಕೆಯಾಗಿದೆ.

ಕಲ್ವಕುರ್ತಿಯಿಂದ ಟಿಆರ್‌ಎಸ್ ಸ್ಪರ್ಧಿಸಲು ಜೈಪಾಲ್ ರೆಡ್ಡಿ ಸಿದ್ಧರಿದ್ದರೆ, ರೇವಂತ್ ಟಿಐರ್ ಎಸ್ ಪಕ್ಷದ ಪರವಾಗಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಯುತ್ತಿದ್ದರು. ಆದರೆ ಹಾಗಾಗಲಿಲ್ಲ. ಆ ಚುನಾವಣೆಯ ನಂತರ, ರೇವಂತ್ ಅವರು ಟಿಆರ್‌ಎಸ್‌ನಿಂದ ದೂರವಿದ್ದರು ಮತ್ತು ಸ್ವಂತವಾಗಿ ನೆಲಮಟ್ಟದಿಂದ ನೇರ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದರು. 2006 ರಲ್ಲಿ ಮಿಡ್ಜಿಲ್ ಮಂಡಲದಿಂದ ZPTC ಚುನಾವಣೆಯಲ್ಲಿ ಅವರು ಸ್ವತಂತ್ರವಾಗಿ ಗೆದ್ದಿದ್ದರು. ಒಂದು ವರ್ಷದ ನಂತರ, ಅವರು ಮಹೆಬೂಬ್‌ನಗರದಿಂದ ಸ್ಥಳೀಯ ಸಂಸ್ಥೆಗಳ ಕೋಟಾದ ಅಡಿಯಲ್ಲಿ MLC ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದರು. ಇದು ಅವರ ರಾಜಕೀಯ ಜೀವನದ ಮಹತ್ವದ ತಿರುವು ಆಗಿತ್ತು.