ಮಧ್ಯಪ್ರದೇಶದಲ್ಲಿ ಬಿಜೆಪಿ ಪಾರುಪತ್ಯ: ‘ಶಿವರಾಜ’ನ ಜತೆ ‘ಮಹಾರಾಜ’ನ ನೆರವಿಗೆ ಕಾಂಗ್ರೆಸ್‌ ಧೂಳೀಪಟ!

ಹೊಸದಿಲ್ಲಿ (ಡಿಸೆಂಬರ್ 3, 2023): ಮಧ್ಯ ಪ್ರದೇಶದಲ್ಲಿ 2018ರಲ್ಲಿ ಗೆದ್ದು 2020ರಲ್ಲಿ ಅಧಿಕಾರದಿಂದ ಕೆಳಗಿಳಿದ ಕಾಂಗ್ರೆಸ್‌ ಈ ಬಾರಿ ಹೀನಾಯ ಸೋಲನುಭವಿಸುತ್ತಿದೆ. ಬಿಜೆಪಿಯು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಕಾಂಗ್ರೆಸ್‌ 65 – 70 ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಸಾಧ್ಯತೆ ಇದೆ. 

ಈ ಸಂಖ್ಯೆಗಳು 2018 ರ ಫಲಿತಾಂಶಗಳಿಗೆ ಹೋಲಿಸಿದರೆ ಬಿಜೆಪಿಗೆ 50ಕ್ಕೂ ಅಧಿಕ ಸ್ಥಾನಗಳ ಲಾಭವನ್ನು ಮತ್ತು ಕಾಂಗ್ರೆಸ್‌ಗೆ ಸುಮಾರು 50 ಕ್ಷೇತ್ರಗಳ ನಷ್ಟವನ್ನು ಪ್ರತಿನಿಧಿಸುತ್ತವೆ. 2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ದಂಗೆಯ ನಂತರ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸರ್ಕಾರ ಪತನವಾಯಿತು; ಈಗಿನ ಕೇಂದ್ರ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ 22 ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆದೊಯ್ದಿದ್ದರು. ಇದು ಈ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. 

ಕಾಂಗ್ರೆಸ್‌ನ 2018 ರ ಗೆಲುವಿಗೆ ಒಂದು ದೊಡ್ಡ ಕಾರಣ ಸಿಂಧಿಯಾ ಅವರ ಭದ್ರಕೋಟೆ – ಚಂಬಲ್-ಗ್ವಾಲಿಯರ್ ಪ್ರದೇಶದಲ್ಲಿ ಕಾಂಗ್ರೆಸ್‌ನ ಉತ್ತಮ ಪ್ರದರ್ಶನ. 34 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಬೆಂಬಲಿಗರು ಬಿಜೆಪಿಗೆ ಜಿಗಿಯುವುದರೊಂದಿಗೆ ಆಡಳಿತ ಪಕ್ಷವು ಐದು ವರ್ಷಗಳ ಹಿಂದಿನ ಸೋಲಿನ ಸೇಡಡು ತೀರಿಸಿಕೊಂಡಿದೆ ಎಂದು ತೋರುತ್ತದೆ. 

ಚಂಬಲ್ – ಗ್ವಾಲಿಯರ್ ಪ್ರದೇಶವು ಎಂಟು ಜಿಲ್ಲೆಗಳನ್ನು ಹೊಂದಿದೆ. ಇವುಗಳಲ್ಲಿ ಐದು – ಗ್ವಾಲಿಯರ್, ಶಿವಪುರಿ, ಡಾಟಿಯಾ, ಅಶೋಕನಗರ ಮತ್ತು ಗುಣ ಗ್ವಾಲಿಯರ್ ಪ್ರದೇಶದಲ್ಲಿ ಮತ್ತು ಮೊರೆನಾ, ಭಿಂಡ್ ಮತ್ತು ಷಿಯೋಪುರ್ ಸೇರಿ 3 ಜಿಲ್ಲೆಗಳು ಇನ್ನೊಂದು ಪ್ರದೇಶದಲ್ಲಿದೆ. ಈ ಎಲ್ಲಾ ಪ್ರದೇಶಗಳು ಹಿಂದಿನ ಗ್ವಾಲಿಯರ್ ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ಸಿಂಧಿಯಾ ಆ ರಾಜಮನೆತನದ ಭಾಗವಾಗಿತ್ತು.

2018 vs 2023 ಚುನಾವಣೆ: ಚಂಬಲ್ ಪ್ರದೇಶ
2018 ರಲ್ಲಿ, ಚಂಬಲ್ ಪ್ರದೇಶದ 13 ಸ್ಥಾನಗಳಲ್ಲಿ, ಕಾಂಗ್ರೆಸ್ 10 ಸ್ಥಾನ ಗೆದ್ದಿದ್ದರೆ, ಈ ಬಾರಿ ಬಿಜೆಪಿ ಮೇಲುಗೈ ಸಾಧಿಸುತ್ತಿದೆ ಎನ್ನಲಾಗಿದೆ. 

2018 vs 2023 ಚುನಾವಣೆ: ಗ್ವಾಲಿಯರ್ ಪ್ರದೇಶ
ಗ್ವಾಲಿಯರ್‌ನಲ್ಲಿ, 2002 ರಿಂದ 2014 ರವರೆಗೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಲೋಕಸಭಾ ಕ್ಷೇತ್ರವಾಗಿದ್ದ ಗುಣದಲ್ಲಿ ನಾಲ್ಕು ಸೇರಿದಂತೆ 21 ಸ್ಥಾನಗಳಿವೆ. ಇದು ಸಿಂಧಿಯಾ ಭದ್ರಕೋಟೆಯಾಗಿತ್ತು, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಐದು ಸ್ಥಾನಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಕಾಂಗ್ರೆಸ್ ಗೆದ್ದುಕೊಂಡಿತು; ಐದು ವರ್ಷಗಳ ನಂತರ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಪಾಳಯದಲ್ಲಿದ್ದು, ಕೇಸರಿ ಪಕ್ಷವು ಗ್ವಾಲಿಯರ್ ಅನ್ನು ಬಹುತೇಕ ಕ್ಲೀನ್ ಸ್ವೀಪ್ ಮಾಡುವ ಹಾದಿಯಲ್ಲಿದೆ.

ಮಧ್ಯಪ್ರದೇಶದ ಉಳಿದ ಭಾಗಗಳು
34 ಸ್ಥಾನಗಳೊಂದಿಗೆ, ಚಂಬಲ್ – ಗ್ವಾಲಿಯರ್ ಪ್ರದೇಶವು ರಾಜ್ಯದ 230 ರಲ್ಲಿ ಶೇಕಡಾ 10 ಕ್ಕಿಂತ ಹೆಚ್ಚಿನದನ್ನು ಹೊಂದಿದೆ ಮತ್ತು, ಇದು ಚುನಾವಣೆಯಲ್ಲಿ ಯಾವ ಪಕ್ಷವು ಗೆಲ್ಲುವ ಸಾಧ್ಯತೆಯಿದೆ ಎಂಬುದರ ಸೂಚಕವಾಗಿ ವ್ಯಾಪಕವಾಗಿ ವೀಕ್ಷಿಸಲ್ಪಡುತ್ತದೆ. ಇನ್ನು, 1196 ಸೀಟುಗಳ ಪೈಕಿ ಮಾಲ್ವಾ ಪ್ರದೇಶದ 88 ಸ್ಥಾನಗಳೂ ಮುಖ್ಯ. ಅಲ್ಲಿನ 88 ಸ್ಥಾನಗಳ ಪೈಕಿ 2018ರಲ್ಲಿ ಪಕ್ಷ 45 ಮತ್ತು ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು. ಈ ಚುನಾವಣೆಯಲ್ಲಿ, ಸಂಖ್ಯೆಗಳು ಸಂಪೂರ್ಣವಾಗಿ ವ್ಯತಿರಿಕ್ತವಾದ್ದು, ಮಾಲ್ವಾದಲ್ಲಿ ಬಿಜೆಪಿ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದೇನು?
ಬಿಜೆಪಿಯ ಮೆಗಾ ಗೆಲುವು ಸ್ಪಷ್ಟವಾದ ನಂತರ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿಗೆ ಸಿಂಧಿಯಾ ಟಾಂಗ್ ನೀಡಿದ್ದಾರೆ. ಯಾರೋ ನನ್ನ ಎತ್ತರದ ಬಗ್ಗೆ ಮಾತನಾಡಿದರು (ಆದರೆ) ಗ್ವಾಲಿಯರ್-ಮಾಲ್ವಾ ಜನರು ತಾವು ಎಷ್ಟು ಎತ್ತರ ಅನ್ನೋದನ್ನು ತೋರಿಸಿದ್ದಾರೆ ಎಂದು ಕಾಲೆಳೆದಿದ್ದಾರೆ.