ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ರಾತ್ರೋ ರಾತ್ರಿ ಮಾತಾ ಆಸ್ಪತ್ರೆ ಗೋಡೆ ಮೇಲೆ 5 ತಿಂಗಳ ಹಳೆ ನೋಟಿಸ್; ಅನುಮಾನಕ್ಕೆ ಕಾರಣವಾದ ಅಧಿಕಾರಿಗಳ ನಡೆ

ಮೈಸೂರು, ನ.29: ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಂಬಂಧ ಮೈಸೂರಿನ‌ ಮಾತಾ ಆಸ್ಪತ್ರೆ ಹಾಗೂ ಅಲ್ಲಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಆಯುರ್ವೇದಿಕ್ ಪೈಲ್ ಡೇ ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ. ಚಂದನ್, ಇದುವರೆಗೂ 900 ಗರ್ಭಪಾತ ಮಾಡಿಸಿ, ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಕಳೆದ ಮೂರು ತಿಂಗಳಲ್ಲಿ ಆಸ್ಪತ್ರೆಯಲ್ಲಿ ನಡೆದಿರುವ ಭ್ರೂಣ ತಪಾಸಣೆ ಬಗ್ಗೆ ಮಾಹಿತಿ ನೀಡುವಂತೆ ಆಸ್ಪತ್ರೆಗೆ ನೋಟಿಸ್ ಅಂಟಿಸಲಾಗಿದೆ.

ರಾತ್ರೋ ರಾತ್ರಿ ಆಸ್ಪತ್ರೆಯ ಗೋಡೆಗೆ ಐದು ತಿಂಗಳ ಹಳೆಯ ನೋಟಿಸ್ ಅಂಟಿಸಲಾಗಿದೆ. ಮೊನ್ನೆ ಇಲ್ಲದ ನೋಟಿಸ್ ಇಂದು ದಿಢೀರ್ ಮಾತಾ ಆಸ್ಪತ್ರೆ ಗೋಡೆ ಮೇಲೆ ಪ್ರತ್ಯಕ್ಷವಾಗಿದೆ. ಅದರಲ್ಲೂ ಐದು ತಿಂಗಳು ಹಳೆಯ ಅಂದರೆ 22-06-2023 ದಿನಾಂಕ ವಿರುವ ನೋಟಿಸ್ ಅಂಟಿಸಲಾಗಿದೆ. ಆಸ್ಪತ್ರೆ ಮೇಲೆ ಭ್ರೂಣ ಹತ್ಯೆಯ ಮೌಖಿಕ ದೂರುಗಳ ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಮೊಬೈಲ್‌ನಲ್ಲಿ ಆಸ್ಪತ್ರೆಯ ವಿಡಿಯೋ ಮಾಡಿಕೊಂಡು ತೆರಳಿದ್ದಾರೆ.

ನೋಟಿಸ್ ಅಂಟಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಟಿಹೆಚ್​ಒಗೆ ಸೂಚನೆ

ಇನ್ನು ನೋಟಿಸ್ ಅಂಟಿಸಿರುವ ಬಗ್ಗೆ ಮಾಹಿತಿ ನೀಡುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಪಿ.ಸಿ.ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದಾರೆ. ಟಿವಿ9ನಲ್ಲಿ ಪ್ರಸಾರವಾದ ಸುದ್ದಿ ಆಧರಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ರಾತ್ರೋರಾತ್ರಿ ಹಳೆಯ ದಿನಾಂಕದ ನೋಟಿಸ್ ಅಂಟಿಸಿದ್ದು ಯಾಕೆ? ಯಾವ ಕಾರಣಕ್ಕೆ ಮಾತಾ ಆಸ್ಪತ್ರೆ ಗೋಡೆಗೆ ನೋಟಿಸ್ ಅಂಟಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದ್ದಾರೆ.