ಭಟ್ಕಳ: ಮದುವೆಯಾಗುದಾಗಿ ನಂಬಿಸಿ ಯುವತಿ ಯೋರ್ವಳ ಜೊತೆ ಲೈಂಗಿಕ ಸಂಪರ್ಕ ಹೊಂದಿ ಮೋಸ ಮಾಡಿದ ಯುವಕನ ವಿರುದ್ಧ ಯುವತಿ ಪೊಲೀಸ ಠಾಣೆಯೆಲ್ಲಿ ದೂರು ನೀಡಿದ ಬೆನ್ನಲ್ಲೇ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ನಾಗಪ್ಪ ನಾಯ್ಕ ರೋಡ್ ಒಂದನೇ ಕ್ರಾಸ್ ನಲ್ಲಿ ನಡಿದಿದೆ.
ಬಂಧಿತ ಯುವಕನ್ನು ಪ್ರವೀಣ ದೇವಾಡಿಗ ಎಂದು ತಿಳಿದು ಬಂದಿದೆ. ಕೋಟೇಶ್ವರ ರೋಡ, ಕೋರಾರಕೇರಿಯ
ಯುವತಿ ನೀಡಿದ ದೂರಿನಲ್ಲಿ ಈತ 2020 ಸಪ್ಟೆಂಬರ್ 17 ರಂದು ಮೊದಲ ಬಾರಿಗೆ ಭಟ್ಕಳದ ದಂಡಿನದುರ್ಗಾ ದೇವಸ್ಥಾನದ ಸಮೀಪ ತನ್ನ ಅಟೋ ರೀಕ್ಷಾದಲ್ಲಿ ತನ್ನ ಇಚ್ಛೆಗೆ ವಿರುದ್ದವಾಗಿ ಮೊದಲ ಬಾರಿಗೆ ದೈಹಿಕ ಸಂಪರ್ಕ ಮಾಡಿದವನು. ತದ ನಂತರ ಇದೇ ರೀತಿ ಮದುವೆಯಾಗುತ್ತೇನೆಂದು ನಂಬಿಸಿ ಪದೇ ಪದೇ ಹಲವು ಬಾರಿ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿದ್ದನು. ಬಳಿಕ 2023 ನವೆಂಬರ್ 21 ರ ರಾತ್ರಿ 7.30 ಸುಮಾರಿಗೆ
ನಾಗಪ್ಪ ನಾಯ್ಕ ರೋಡ್ 1 ನೇ ಕ್ರಾಸನಲ್ಲಿ ತಾನು ಕೆಲಸ ಮಾಡುವ ಮನೆಗೆ ಬಂದು ಮನಃ ಮದುವೆಯಾಗುತ್ತೆನೆ ಎಂದು ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ನಂತರ ತಾನು ಮದುವೆಯಾಗುವುದಿಲ್ಲಾ ತನಗೆ ಮದುವೆಯಾಗು ಎಂದು ಒತ್ತಾಯ ಮಾಡಬೇಡ ಪದೇ ಪದೇ ಮದುವೆಯಾಗು ಎಂದು ಒತ್ತಾಯ ಮಾಡಿದರೆ ಒಂದು ಗತಿ ಕಾಣಿಸುತ್ತೇನೆ ಎಂದು ಧಮಕಿ ಹಾಕಿ ಅಲ್ಲಿಂದ ಹೋಗಿದ್ದು ಮದುವೆಯಾಗದೇ ತನಗೆ ಮೊಸಮಾಡಿದ್ದಾನೆ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ದೂರು ನೀಡಿದ್ದಾಳೆ
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ