ಎಲ್ಲ ಬಿಟ್ಟ ಭಂಗಿ ನೆಟ್ಟ ಎಂಬ ಗಾದೆ ಯಾರಿಗಾದರೂ ಅನ್ವಯಿಸುವುದಿದ್ದರೆ ಅದು ರಾಜಕೀಯವಾಗಿ ಐಸಿಯು ದಲ್ಲಿ ಇರುವ ಆನಂದ ಅಸ್ನೋಟಿಕರ್ ಗೆ ಮಾತ್ರ !!
ರಾಜಕೀಯವಾಗಿ ಆನಂದ್ ಈಗ ಕೃತಕ ಉಸಿರಾಟದಲ್ಲಿ ಇದ್ದಾರೆ. ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ.
ರಾಜಕೀಯ ಅವಸಾನದ ಅಂಚಿಗೆ ಬಂದು ನಿಂತಿದ್ದಾರೆ.
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಲೂ ಆಗದೆ ಹೇಡಿಯಂತೆ ಚುನಾವಣಾ ಕಣದಿಂದ ಓಡಿಹೋದ ಈ ಉತ್ತರಕುಮಾರ !
ಮತ್ತೆ ಮಾನ ಮರ್ಯಾದೆ ಬಿಟ್ಟು ಜೆಡಿಎಸ್ ನ ಅಂಗಿ ತೊಡಲು ಮುಂದಾಗಿದ್ದಾರೆ.
ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಇವರಲ್ಲಿದ್ದ ಅವಕಾಶವಾದಿತನ ಜಾಗೃತವಾಗಿದೆ. ಹೇಗಾದರೂ ಮಾಡಿ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರಿಂದ ಹಣ ಪಡೆದು ಅವರೊಂದಿಗೆ ಕೈಜೋಡಿಸಿ, ಬಿಜೆಪಿ ವಿರುದ್ಧ ಕೆಲಸ ಮಾಡಿ ಜೆಡಿಎಸ್ ನಿಲುವನ್ನು ಧಿಕ್ಕರಿಸಿದ ಆನಂದ ಈಗ ಯಾವ ಮುಖ ಹೊತ್ತು ಜನತೆಯ ಮುಂದೆ ಬರುತ್ತಿದ್ದಾರೆ? ಈ ಲಜ್ಜೆಗೇಡಿತನ ಇವರನ್ನು ಬಿಟ್ಟರೆ ಮತ್ತಾರಿಗೆ ಬರಲು ಸಾಧ್ಯ. ಜೆಡಿಎಸ್ ಗೆ ಟೋಪಿ ಹಾಕುವ ಹವಣಿಕೆಯಲ್ಲಿರುವ ಆನಂದ್ ಅವರ ಮರ್ಮ ಜೆಡಿಎಸ್ ನಾಯಕರಿಗೆ ಚೆನ್ನಾಗಿಯೇ ಗೊತ್ತು.
ಆದರೂ ಅವರ ಬಳಿ ಹಲ್ಲುಗಿಂಚುತ್ತಿರುವ ಇವರನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇವರ ಚಾಲಕನ ಬಳಿ ಪತ್ತೆಯಾದ ಹಣದ ಹಿನ್ನೆಲೆ ಕೆದಕಿದರೆ ಇವರ ಕೈ ಎಷ್ಟು ಶುದ್ದ ಎನ್ನುವುದು ಗೊತ್ತಾಗುತ್ತದೆ.
ಆನಂದ ಈಗ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ನಾಟಕ ಮಾಡಿ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಪೀಕುವ ಆಲೋಚನೆಯಲ್ಲಿದ್ದಾರೆ.
ಕಳೆದ ಚುನಾವಣೆಯಲ್ಲಿ ಸೈಲ್ ರಿಂದ ಕೋಟಿ ಕೋಟಿ ರೂಪಾಯಿ ಹಣ ಎಗರಿಸಿದ ರುಚಿ ಹತ್ತಿದ್ದು ಈಗಲೂ ಅದನ್ನೆ ಮಾಡಲು ಹೊಂಚು ಹಾಕಿದ್ದಾರೆ. ಅವರಿಗೆ ಚುನಾವಣೆಗೆ ಸ್ಪರ್ಧಿಸುವ ತಾಕತ್ತು ಇದ್ದರೆ ಕಳೆದ ವಿಧಾನಸಭೆ ಚುನಾವಣೆಯಲ್ಲೇ ಸ್ಪರ್ಧಿಸುತ್ತಿದ್ದರು.
ಚುನಾವಣೆಗಿಂತ ಅನಾರೋಗ್ಯದಿಂದ ಇರುವ ತನ್ನ ತಾಯಿ ತನಗೆ ಮುಖ್ಯ ಎಂದು ಆಗ ಹೇಳಿದ್ದರು.
ಆನಂದ್ ಅವರೇ ಈಗಲೂ ನಿಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವುದನ್ನು ಬಿಟ್ಟು ತಾಯಿಯನ್ನು ಸರಿಯಾಗಿ ನೋಡಿಕೊಳ್ಳಿ.
ಇಲ್ಲದಿದ್ದಲ್ಲಿ ಹಿಂದಿನ ಚುನಾವಣೆಯಲ್ಲಿ ತಾಯಿಯ ಅನಾರೋಗ್ಯವನ್ನೂ ನೀವು ಸೈಲ್ ರಿಂದ ಹಣ ಪೀಕಲು ಬಳಸಿಕೊಂಡಿದ್ದು ಸಾಬೀತಾಗುತ್ತದೆ.
ನಿಮ್ಮ ತಾಯಿಯ ಬಗ್ಗೆ ನಮಗೆ ಗೌರವ ಇದೆ.
ಅವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಪ್ರಾರ್ಥಿಸುತ್ತೇವೆ.
ಕೆಟ್ಟ ಮಗ ಹುಟ್ಟಬಹುದು ಅದರೆ ಕೆಟ್ಟ ತಾಯಿ ಯಾವತ್ತೂ ಇರಲಾರದು ಎನ್ನುವುದನ್ನು ನೆನಪಿಟ್ಟುಕೊಳ್ಳಿ.