ಹೊನ್ನಾವರ ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯ್ತಿಯ ಅನಂತವಾಡಿ ಕೋಟ -ತುಂಬೆಬಿಳು ಗ್ರಾಮದಲ್ಲಿ ರೈಲ್ವೆ ಗೆಟ್‌ಗೇ ಮೇಲ್ಸುತುವೇ ನಿರ್ಮಿಸಿಕೊಡುವಂತೆ, ತಹಶಿಲ್ಧಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಸಿಲಾಯ್ತು.
ಕೋಟ – ತುಂಬೆಬಿಳು – ಅನಂತವಾಡಿ ರೈಲ್ವೆ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿ ಶರವಾತಿ ಸರ್ಕಲ್‌ನಿಂದ ತಹಸಿಲ್ಶಾರ ಕಚೇರಿವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಹಾಗೇ ಪ್ರಧಾನ ಮಂತ್ರಿಗಳಿಗೆ, ಕೇಂದ್ರ ರೈಲ್ವೆ ಸಚಿವರಿಗೆ, ಕರ್ನಾಟಕ ಸಿಎಂ ಮತ್ತು ಉತ್ತರ ಕನ್ನಡ ಸಂಸದರಿಗೂ ಮನವಿ ಸಲ್ಲಿಸಿದ್ರು…
2024ರ ಮಾರ್ಚ 31 ರೊಳಗಡೆ ರೈಲ್ವೆ ಮೇಲ್ಸೆತುವೆ ನಿರ್ಮಿಸಿಕೊಡಬೇಕು. ಇಲ್ಲದಿದ್ದಲ್ಲಿ, 2024ರ ಎಪ್ರಿಲ್ 15 ನಂತರ ಸದ್ರಿ ರೈಲ್ವೆ ಗೇಟಿನಲ್ಲಿ ಸಾರ್ವಜನಿಕರು ರೈಲು ನಿಲ್ಲಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ರು. ಹಾಗೇ ರೈಲ್ವೆ ಮೇಲ್ಸೆತುವೆ ಆಗುವವರೆಗೆ ನಮ್ಮ ಗ್ರಾಮದ ಎಲ್ಲಾ ಬೂತಗಳಲ್ಲಿ ಯಾವುದೇ ಲೋಕಸಭೆ/ವಿಧಾನಸಭೆ/ ಜಿಲ್ಲಾ ಪಂಚಾಯತಿ/ ಗ್ರಾಮಪಂಚಾಯತ ಚುನಾವಣೆ ಬಂದರು ಅದನ್ನು ನಾವು ಮತದಾನ ಮಾಡದೇ ಬಹಿಷ್ಕಾರ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ…
ಇನ್ನು ಮೇಲ್ಸುತುವೆ ವಿಚಾರವಾಗಿ ಕೋಟ, ತುಂಬೇಬೀಳು ಅನಂತವಾಡಿ ರೈಲ್ವೆ ಮೇಲ್ಸೆತುವೆ ಹೋರಾಟ ಸಮಿತಿ ಕಳೆದ ಐದು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ಈಗಾಗಲೇ ಸಮಿತಿ ಮಂಕಾಳ ವೈದ್ಯರ ಬಳಿ ಅಳಲನ್ನು ತೋಡಿಕೊಂಡಿದ್ದು, ಸಚಿವರು ಈಗ ದುಡ್ಡಿಲ್ಲ ಗ್ಯಾರಂಟಿ ಯೋಜನೆಗಳ ಮೇಲಿದ್ದೇವೆ. ಡಿಸೆಂಬರ್ ನಂತರ ನೋಡೊದಾಗಿ ಮಾತಿಗೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ…
ಈ ವೇಳೆ ಕೋಟ, ತುಂಬೇಬೀಳು ಅನಂತವಾಡಿ ರೈಲ್ವೆ ಮೇಲ್ಸೆತುವೆ ಹೋರಾಟ ಸಮಿತಿ ಗಜಾನನ ನಾಯ್ಕ, ಉಪಾಧ್ಯಕ್ಷ ಪಾಂಡುರಂಗ ಗೌಡ, ರಾಮಕೃಷ್ಣ ನಾಯ್ಕ, ಮಾದೇವ ಗೌಡ, ಲಕ್ಷ್ಮೀ ನಾಯ್ಕ, ನಾಗಮ್ಮ ನಾಯ್ಕ, ಮಾದೇವ ನಾಯ್ಕ, ಗಣಪತಿ ನಾಯ್ಕ, ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆ ಕೂಡ ಸಾಥ್ ನೀಡಿತು..