ಬೆಂಗಳೂರು, ನ.23: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ ಯೋಜನೆ’ (Shakti Scheme) ಕೋಟ್ಯಾಂತರ ಮಹಿಳೆಯರುಗೆ ಉಚಿತ ಪ್ರಯಾಣ (Free Bus Travel For Women) ಕಲ್ಪಿಸಿದೆ. ರಾಜ್ಯದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಶತ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಜೂನ್ 11 ರಿಂದ ನವೆಂಬರ್ 22 ವರೆಗೆ ಶತಕೋಟಿ ಮಹಿಳೆಯರು ಉಚಿತ ಪ್ರಯಾಣ ಸೇವೆಯ ಲಾಭ ಪಡೆದಿದ್ದಾರೆ. ಹೌದು ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಇಲ್ಲಿವರೆಗೆ ನೂರು ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಶಕ್ತಿ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ 2397 ಕೋಟಿ ವ್ಯಯವಾಗಿದೆ. ಇನ್ನು ಕೆಲವೇ ದಿನಗಳಲ್ಲಿ 2500 ಕೋಟಿ ತಲುಪಲಿದೆ.
ಪ್ರತಿನಿತ್ಯ ಲಕ್ಷ ಲಕ್ಷ ಮಹಿಳಾ ಮಣಿಗಳು ಪ್ರಯಾಣಿಸುತ್ತಿದ್ದು ಇದುವರೆಗೂ 2397ಕೋಟಿ ವ್ಯಯವಾಗಿದೆ. ಜೂನ್ 11 ರಿಂದ ನವೆಂಬರ್ 22 ರವರೆಗೂ 100.47 ಕೋಟಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಅಂದರೆ ಕಳೆದ 165 ದಿನಗಳಲ್ಲಿ 100,47,56,184 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯ 2397ಕೋಟಿ ತಲುಪಿದೆ.
ಜೂನ್ 11ರಿಂದ ನ.22 ರ ವರೆಗೆ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ
- ಕೆಎಸ್ಆರ್ಟಿಸಿ -30,12,17,350 ಮಹಿಳೆಯರು ಪ್ರಯಾಣಿಸಿದ್ದು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 900,29,21,508 ರೂ.
- ಬಿಎಂಟಿಸಿ – 32,69,60,082 ಮಹಿಳೆಯರು ಪ್ರಯಾಣಿಸಿದ್ದು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 420,82,19,200 ರೂ.
- ವಾಯುವ್ಯ- 23,37,23,007 ಮಹಿಳೆಯರು ಪ್ರಯಾಣಿಸಿದ್ದು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 600,69,91,513 ರೂ.
- ಕಲ್ಯಾಣ ಕರ್ನಾಟಕ – 14,28,55,745 ಮಹಿಳೆಯರು ಪ್ರಯಾಣಿಸಿದ್ದು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 475,98,79,341 ರೂ.
- ಜೂನ್ 11 ರಿಂದ ನವೆಂಬರ್ 20ರ ವರೆಗೂ 100,47,56,184 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2397,80,11,562 ರೂ. ಆಗಿದೆ.