ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್​ ತಂತಿ ತಗುಲಿ 70 ಜನರ ಸಾವು: ಇಲ್ಲಿದೆ ಸಂಪೂರ್ಣ ಡೀಟೈಲ್ಸ್

ಬೆಂಗಳೂರು ನ.20: ರಾಜ್ಯ ರಾಜಧಾನಿ ಬೆಂಗಳೂರಿನ ಕಾಡುಗೋಡಿಯಲ್ಲಿ ರವಿವಾರ (ನ.19) ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಸಜೀವದಹನವಾಗಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಾಯಿ ಮತ್ತು ಮಗುವಿನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಐವರನ್ನು ಅಮಾನತು ಮಾಡಲಾಗಿತ್ತು. ಹಾಗೇ ಈ ಐವರನ್ನು ಬಂಧಿಸಲಾಗಿತ್ತು. ಇದೀಗ ಈ ಅಧಿಕಾರಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಕರೆಂಟ್​ ತಂತಿ ತುಳಿದು ಸತ್ತ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಕೂಡ ಸಾಕಷ್ಟು ಜನ ತಂತಿ ವಿದ್ಯುತ್​ ತಂತಿ ತುಳಿದು ಮೃತಪಟ್ಟಿದ್ದಾರೆ.

  1. 2018-19 ರಲ್ಲಿ ತಂತಿ ತಗುಲಿ 11 ಜನ ಮೃತಪಟ್ಟಿದ್ದರು. ಒಬ್ಬರು ಗಾಯಗೊಂಡಿದ್ದರು. ಒಟ್ಟು 12 ಜನರಿಗೆ ವಿದ್ಯುತ್​ ತಂತಿ ತಗುಲಿ ಶಾಕ್ ಹೊಡೆದಿತ್ತು.
  2. 2019-20 ರಲ್ಲಿ 10 ಜನ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದರು. ಒಟ್ಟು 13 ಜನರಿಗೆ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದಿತ್ತು.
  3. 2020-21 ರಲ್ಲಿ 9 ಜನ ಮೃತಪಟ್ಟಿದ್ದರು, ಮೂವರಿಗೆ ಗಾಯಗಳಾಗಿದ್ದವು. ಒಟ್ಟು 12 ಜನರಿಗೆ ವಿದ್ಯುತ್​ ತಂತಿ ತಗುಲಿತ್ತು.
  4. 2021-22 ರಲ್ಲಿ 13 ಜನ ಮೃತಪಟ್ಟಿದ್ದರು, ಇಬ್ಬರು ಗಾಯಗೊಂಡಿದ್ದರು. ಒಟ್ಟು 15 ಜನರಿಗೆ ತಂತಿ ತಗುಲಿತ್ತು.
  5. 2022-23 ರಲ್ಲಿ 19 ಜನ ಸಾವೀಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಒಟ್ಟು 21 ಜನರಿಗೆ ಬೆಸ್ಕಾಂ ವಿದ್ಯುತ್​ ತಂತಿ ತಗುಲಿತ್ತು.
  6. 2023-24 (2023ರ ಅಕ್ಟೋಬರ್​ ವರೆಗೆ) 8 ಜನ ಮೃತಪಟ್ಟಿದ್ದಾರೆ. ಒಟ್ಟು 8 ಜನರಿಗೆ ತಂತಿ ತಗುಲಿದೆ. ಕಳೆದ 5 ವರ್ಷದಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ 81 ಜನರಿಗೆ ವಿದ್ಯುತ್​ ತಂತಿ ತಗುಲಿದ್ದು, ಇದರಲ್ಲಿ ಒಟ್ಟು 70 ಜನ ಮೃತಪಟ್ಟಿದ್ದಾರೆ.