ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ ತಂಬಾಕು ಅಂಗಡಿಗಳ ಮೇಲೆ ಅಧಿಕಾರಿಗಳಿಂದ ದಾಳಿ – ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಕರಪತ್ರ ಹಂಚಿಕೆ

ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ ತಂಬಾಕು ದಾಳಿಯ ಕುರಿತು, ಬಾಲ ಕಾರ್ಮಿಕ, ಕಿಶೋರ ಕಾರ್ಮಿಕ ನಿರ್ಮೂಲನ ಮತ್ತು ಪುನರ್ ವಸತಿ ಕಾರ್ಯಕ್ರಮದ ತಾಲ್ಲೂಕು ಮಟ್ಟದ ಅಧಿಕಾರಿಗಳು ಜಂಟಿಯಾಗಿ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ರು..

ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ ತಂಬಾಕು ದಾಳಿಯ ಕುರಿತು, ಬಾಲ ಕಾರ್ಮಿಕ, ಕಿಶೋರ ಕಾರ್ಮಿಕ ನಿರ್ಮೂಲನ ಮತ್ತು ಪುನರ್ ವಸತಿ ಕಾರ್ಯಕ್ರಮದ ತಾಲ್ಲೂಕು ಮಟ್ಟದ ಅಧಿಕಾರಿಗಳು ಜಂಟಿಯಾಗಿ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ಶನಿವಾರ ದಾಳಿ ನಡೆಸಿದರು.ಇದೇ ವೇಳೆ 2 ಅಂಗಡಿಗಳಿಗೆ ತಂಬಾಕು ದಳದಿಂದ ದಂಡ ವಿಧಿಸಲಾಯಿತು. ಜನರಿಗೆ ತಂಬಾಕು ಬಳಸುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು. ಕಾರ್ಮಿಕ ಇಲಾಖೆಯಿಂದ ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಕರಪತ್ರಗಳನ್ನು ಹೊಟೆಲ್ ಅಂಗಡಿಗಳಿಗೆ ನೀಡಿ ಜನರಿಗೆ ಜಾಗೃತೆ ಮೂಡಿಸಿದರು.

ಈ ವೇಳೆ ತಾಲೂಕ ಆರೋಗ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ, ಜಿಲ್ಲಾ ಬಾಲ ಕಾರ್ಮಿಕ ನಿರ್ದೇಶಕ ಸಂದೇಶ ಗಾಂವಕರ, ಕಾರ್ಮಿಕ ನಿರೀಕ್ಷಕ ಗುರುಪ್ರಸಾದ ನಾಯ್ಕ, ಸಿ.ಡಿ.ಪಿ.ಓ ಸುಶೀಲಾ ಮೋಗೆರ, ಸಮಾಜ ಕಲ್ಯಾಣಾಧಿಕಾರಿ ಸುಮಂಗಲಾ ಭಟ್, ಆರೋಗ್ಯ ಇಲಾಖೆ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚಿದಾನಂದ, ಆನಂದ ಶೆಟ್ ಹಾಗು ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಬಿ.ಸಿ.ಎಮ್ ಇಲಾಖೆ, ಪಟ್ಟಣ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು…