ಹೊನ್ನಾವರ ತಾಲೂಕಿನಲ್ಲಿ ಕಳೆಗಟ್ಟಿದ ದೀಪಾವಳಿ ಸಂಭ್ರಮ- ದುಬಾರಿ ನಡುವೆಯೂ ಹಬ್ಬದ ಪರಿಕರಗಳ ಖರೀದಿ ಜೋರು

ಹೊನ್ನಾವರದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿದ್ದು, ಮಾರುಕಟ್ಟೆಯಲ್ಲಿ ಹೂ ಹಣ್ಣು ಸೇರಿದಂತೆ ಹಬ್ಬದ ಪರಿಕರಿಗಳ ವ್ಯಾಪಾರ ಜೋರಾಗಿದೆ. ಅಲಂಕಾರಿಕ ವಸ್ತುಗಳಿಗೂ ಹೆಚ್ಚಿನ ಬೇಡಿಕೆಯಿದ್ದು, ದುಬಾರಿ ದರದ ನಡುವೆಯೂ ಭರ್ಜರಿ ವ್ಯಾಪರ ವಹಿಹಾಟು ನಡೆಯುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ..

ಹೊನ್ನಾವರದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿದ್ದು, ಮಾರುಕಟ್ಟೆಯಲ್ಲಿ ಹೂ ಹಣ್ಣು ಸೇರಿದಂತೆ ಹಬ್ಬದ ಪರಿಕರಿಗಳ ವ್ಯಾಪಾರ ಜೋರಾಗಿದೆ. ಅಲಂಕಾರಿಕ ವಸ್ತುಗಳಿಗೂ ಹೆಚ್ಚಿನ ಬೇಡಿಕೆಯಿದ್ದು, ದುಬಾರಿ ದರದ ನಡುವೆಯೂ ಭರ್ಜರಿ ವ್ಯಾಪರ ವಹಿಹಾಟು ನಡೆಯುತ್ತಿದೆ. ಹಬ್ಬದ ಹಿನ್ನೆಲೆ ಹೊನ್ನಾವರದ ಶರವತಿ ಸರ್ಕಲ್‌, ಮಾರುಕಟ್ಟೆ, ಹಾಗೂ ರಸ್ತೆ ಬದಿಗಳಲ್ಲಿ ಹೂ ಹಾಗೂ ದೀಪದ ಹಣತೆ ಸೇರಿದಂತೆ ಇನ್ನಿತರ ಹಬ್ಬದ ಪರಿಕರಗಳನ್ನು ಮಾರಾಟ ಮಾಡಲಾಗುತ್ತಿದೆ.ಹಬ್ಬಕ್ಕೆ ಮೆರಗು ತರುವ ಹೂ ಮಾಲೆಯ ಮಾರಾಟ ಜೋರಾಗಿದ್ದು, ದೂರದ ಹಾವೇರಿಯಿಂದ ಬಂದ ಹೂವಿನ ವ್ಯಾಪಾರಿಯೊಬ್ಬರು ನುಡಿಸಿರಿಯೊಂದಿಗೆ ಮಾತನಾಡಿ, ಈ ಬಾರಿ ಮಳೆ ಕೈ ಜಾಸ್ತಿಯಾಗಿದ್ದರಿಂದ ಹೂ ಬೆಳೆಯಲು ಸಾಧ್ಯವಾಗಿಲ್ಲ. ಒಂದು ಮಾರು ಹೂವಿಗೆ 50 ರಿಂದ 60 ರೂ ಮಾರಾಟ ಮಾಡ್ತಿದ್ದೇವೆ. ಗ್ರಾಹಕರು ಕೂಡ ಬರ್ತಿದ್ದಾರೆ. ಪ್ರತಿ ವರ್ಷ ದೀಪಾವಳಿ, ದಸರಾ ಹಾಗೂ ದೊಡ್ಡ ದೊಡ್ಡ ಹಬ್ಬಗಳಿಗೆ ಇಲ್ಲಿಗೆ ಹೂ ವ್ಯಾಪರಕ್ಕೆ ಬರುತ್ತೇವೆ. ಆದ್ರೆ ಈ ಬಾರಿ ಮಳೆಯ ಕಾರಣದಿಂದ ಸ್ವಲ್ಪ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಅಳಲು ತೋಡಿಕೊಂಡ್ರು..

ಗ್ರಾಹಕರೊಬ್ಬರು ಮಾತನಾಡಿ, ದೀಪಾವಳಿ ಹಬ್ಬದ ಶುಭಾಶಯ ಕೋರಿದ್ರು. ದೊಡ್ಡ ಹಬ್ಬವಾಗಿದ್ದರಿಂದ ಬಹಳ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿದ್ದೇವೆ. ದೀಪಾವಳಿ ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿದೆ. ಪಟಾಕಿ ಬಳಕೆ ಕಡಿಮೆ ಮಾಡಿ ಮತ್ತು ಹೂವಿನ ದರವೂ ಕೂಡ ಕಡಿಮೆ ಇದೆ. ಕೈಗಟುಕುವ ದರದಲ್ಲಿ ಎಲ್ಲ ಸಾಮಗ್ರಿಗಳು ದೊರೆಯುತ್ತಿವೆ ಎಂದು ಹೇಳಿದ್ರು..ಒಟ್ನಲ್ಲಿ ಸುಡುಬಿಸಿಲಿನ ಮಧ್ಯದಲ್ಲೂ ಕೂಡ ಬೆಳಕಿನ ಹಬ್ಬಕ್ಕೆ ಈಗಾಗಲೇ ಗ್ರಾಹಕರು ಸಾಮಗ್ರಿಗಳನ್ನು ಖರೀದಿಯಲ್ಲಿ ಬ್ಯೂಸಿಯಾಗಿದ್ದು, ಸಂಭ್ರಮದಿಂದ ದೀಪಾವಳಿ ಆಚರಿಸಲು ಹೊನ್ನಾವರದ ಜನತೆ ಸಜ್ಜಾಗಿದ್ದಾರೆ..