ದಾಂಡೇಲಿಯಲ್ಲಿ ಮನೆ ವಿತರಣೆ ಹಾಗೂ ನಿವೇಶನಕ್ಕೆ ಆಗ್ರಹಿಸಿ ನಡೆಯುತ್ತಿದ್ದ ಧರಣಿ ಅಂತ್ಯ.

ದಾಂಡೇಲಿಯ ಅಂಬೇವಾಡಿಯಲ್ಲಿ ಆಶ್ರಯ ಮನೆ ವಿತರಣೆ ಹಾಗೂ ಕೆ.ಎಚ್.ಬಿ ನಿವೇಶನಕ್ಕೆ ಆಗ್ರಹಿಸಿ, ನಗರ ಸಭೆಯ ಮುಂಬಾಗದಲ್ಲಿ ನಡೆಯುತ್ತಿದ್ದ ಧರಣಿ ಗುರುವಾರ ಅಂತ್ಯಗೊಂಡಿದೆ.

ದಾಂಡೇಲಿಯ ಅಂಬೇವಾಡಿಯಲ್ಲಿ ಜಿ ಪ್ಲಸ್‌ 2 ಆಶ್ರಮ ಮನೆ ವಿತರಣೆ ಹಾಗೂ ಕೆ.ಎಚ್.ಬಿ ನಿವೇಶನಕ್ಕೆ ಆಗ್ರಹಿಸಿ, ದಾಂಡೇಲಿ ಸಮಗ್ರ ಹೋರಾಟ ಸಮಿತಿಯ ವತಿಯಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವು ಗುರುವಾರ ಅಂತ್ಯವಾಯ್ತು.ಧರಣಿ ನಿರತರ ಜೊತೆ ಗೃಹ ಮಂಡಳಿ ಅಧಿಕಾರಿ ಜ್ಯೋತಿ ನಾಜ್ರೆ ಹಾಗೂ ಜಿ ಪ್ಲಸ್‌ 2 ಗುತ್ತಿಗೆದಾರ ಸಂಘದವರು ಮಾತುಕತೆ ನಡೆಸಿ ಇನ್ನು 3 ತಿಂಗಳಲ್ಲಿ 384 ಆಶ್ರಯ ಮನೆಗಳನ್ನು ಮಂಜೂರು ಮಾಡಿಸಿ ನಗರ ಸಭೆಗೆ ಹಸ್ತಾಂತರಿಸುವುದಾಗಿ ಭರವಸೆ ನೀಡಿದ್ರು. ಅದಾದ ಬಳಿಕ ಉಳಿದ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಾಗುವುದೆಂದು ಹೇಳಿದ್ರು.

ಇನ್ನು ಕೆ.ಎಚ್.ಬಿ.ನಿವೇಶನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಜ್ಯೋತಿ ನಾಜ್ರೆ ಭರವಸೆ ನೀಡಿದ್ರು.
ಈ ವೇಳೆ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್‌, ಶೈಲೇಶ್‌ ಪರಮಾನಂದ, ಪೌರಾಯುಕ್ತರು, ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್‌, ಪ್ರಧಾನ ಕಾರ್ಯದರ್ಶಿ ಆರ್.ವಿ.ಗಡೆಪ್ಪನವರ್‌ ಮೊದಲಾದವರು ಉಪಸ್ಥಿತರಿದ್ದರು..