ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ನಡೆದ ದೈವ ನಿಂದನೆ ಕೃತ್ಯ ಖಂಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ಬಂಧಿತರಾದ ನಿರಪರಾಧಿಗೆ ಅನ್ಯಾಯವಾಗಬಾರದು ಎಂದು ಹಿಂದೂ ಕಾರ್ಯಕರ್ತರು ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ದಲಿತ ಸಮುದಾಯದಿಂದ ಕೈಸ್ತ ಧರ್ಮಕ್ಕೆ ಮತಾಂತರವಾದ ವ್ಯಕ್ತಿಯೊರ್ವ ಅರೆಅಂಗಡಿ ಸರ್ಕಲ್ ಸಮೀಪ ಇರುವ ಕರಿಕಾನಮ್ಮ ದೇವಾಲಯದ ಸ್ವಾಗತ ಕಮಾನಿನ ಬಳಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ಪ್ರಶ್ನಿಸಿದ ವ್ಯಕ್ತಿಗೆ ಹಲ್ಲೆಮಾಡಿ ನಿಂದನೆ ನಡೆಸಿ, ಆ ವ್ಯಕ್ತಿಯ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾನೆ. ಇದು ದುರುದ್ದೇಶದಿಂದ ಕೂಡಿದ ಪ್ರಕರಣವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ತಹಶೀಲ್ದಾರ ರವಿರಾಜ್ ದಿಕ್ಷೀತ್ ಮನವಿ ಸ್ವೀಕರಿಸಿದರು. ಈ ವೇಳೆ ಹಿಂದೂ ಸಂಘಟನೆಯ ಪ್ರಮುಖರಾದ ವಿಶ್ವನಾಥ ನಾಯಕ ವಿಜು ಕಾಮತ, ಸಂಜು ಶೇಟ್, ಮುರುಳಿದರ ಗಾಯತೊಂಡೆ, ಹರಿಶ್ಚಂದ್ರ ನಾಯ್ಕ, ಅರೇಅಂಗಡಿ ಭಾಗದ ಕಾರ್ಯಕರ್ತರು ಹಾಜರಿದ್ದರು.