ಅಂಕೋಲಾ : ದಿವಂಗತ ಪಿ ಎಸ್ ಕಾಮತ್ ಸ್ಮರಣಾರ್ಥ ಜಿಲ್ಲಾ ಮಟ್ಟದ 10ನೇ ವರ್ಷದ ಚರ್ಚಾ ಸ್ಪರ್ಧೆಯ ಅಂಗವಾಗಿ ತಾಲ್ಲೂಕು ಹಂತದ ಚರ್ಚಾ ಸ್ಪರ್ಧೆಯು ಇಲ್ಲಿನ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಸೋಮವಾರ ನಡೆಯಿತು.
ಶಿವಾಜಿ ಬಿ ಎಡ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಶಿವಾನಂದ ವಿ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಹತ್ತು ವರ್ಷಗಳಿಂದ ಜಿ ಸಿ ಕಾಲೇಜಿನಲ್ಲಿ ಚರ್ಚಾ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲಾಗುತ್ತಿದೆ. ಜಿ ಸಿ ಕಾಲೇಜಿನ ಚರ್ಚಾ ಸ್ಪರ್ಧೆಗೆ ಒಳ್ಳೆಯ ಇತಿಹಾಸವಿದ್ದು ಅಂದಿನ ವೈಭವ ಇಂದಿಗೂ ಇದೆ. ಕಾಲೇಜುಗಳ ಹೆಚ್ಚಳದ ಪರಿಣಾಮ ಈಗ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಶಿಕ್ಷಣದ ಗುಣಮಟ್ಟ ಉನ್ನತ ಮಟ್ಟದಲ್ಲಿದೆ ಎಂದರು
ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಬಿ ವಸ್ತ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಪರ್ಧೆಯ ನಿರ್ಣಾಯಕರಾಗಿ ಹಿರಿಯ ವಕೀಲ ವಾಸುದೇವ ಎಸ್ ನಾಯಕ, ಪತ್ರಕರ್ತ ನಾಗರಾಜ್ ಎಸ್ ಜಾಂಬಳೇಕರ ಕಾರ್ಯ ನಿರ್ವಹಿಸಿದರು.
ಉಪನ್ಯಾಸಕ ಪ್ರೊ. ನಾಗರಾಜ ದಿವಗಿಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಆರ್ ಪಿ ಭಟ್ ವಂದಿಸಿದರು. ಕುಮಾರಿ ಹೊನಲು ನಾಯಕ ಮತ್ತು ಸಂಜನಾ ನಾಯಕ ಕಾರ್ಯಕ್ರಮವನ್ನು ನಿರ್ವಹಿಸಿದರು. ಕುಮಾರಿ ಆರ್ಯ ಪ್ರಭು ಮತ್ತು ಸಂಗಡಿಗರು ಪ್ರಾರ್ಥಿಸಿದರು.
‘ರಾಷ್ಟ್ರೀಯ ಭಾವೈಕ್ಯತೆಗೆ ಏಕರೂಪ ನಾಗರಿಕ ಸಹಿತೆ ಅಗತ್ಯವಿದೆ’ ಈ ವಿಷಯದ ಮೇಲೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಅಂಕೋಲಾದ ಜಿ ಸಿ ಕಾಲೇಜಿನ ಸೃಷ್ಟಿ ನಾಯಕ ಪ್ರಥಮ, ಜಿ ಸಿ ಕಾಲೇಜಿನ ನಿಶ್ಚಿತಾ ನಾಯಕ್ ದ್ವಿತೀಯ ಹಾಗೂ ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಯೋಗೇಶ ಪಟಗಾರ ತೃತೀಯ ಸ್ಥಾನವನ್ನು ಪಡೆದರು.
ಉಪನ್ಯಾಸಕರಾದ ವಿ ಎಮ್ ನಾಯ್ಕ, ಆರ್ ಪಿ ಭಟ್, ಮಂಜು ಪಾಟೀಲ, ಡಿ ಪಿ ಕುಚ್ಚಿನಾಡ, ಅಶ್ವಿನ ರಂಜಿತಾ ತಾಂಡೇಲ್, ಪವಿತ್ರಾ ಪೈ ಇದ್ದರು.