ಹೊನ್ನಾವರದ ಎಪಿಎಂಸಿ ಸೊಸೈಟಿಯಲ್ಲಿ ವಿನೂತನ ಕಾರ್ಯಕ್ರಮ

ಹೊನ್ನಾವರ: ಈ ವಿನೂತನ ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳ ಅಜ್ಜ-ಅಜ್ಜಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಎಂ.ಪಿ.ಇ.ಸೊಸೈಟಿ ಅಧ್ಯಕ್ಷ ‌ಕೃಷ್ಣಮೂರ್ತಿ ಭಟ್ಟ ಶಿವಾನಿ ಮಾತನಾಡಿ ಹಿರಿಯರ ದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ‌ .ಹಳೆಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ ಹಿರಿಯರು ಮಕ್ಕಳ ಜೊತೆ ಇದ್ದರೆ ಅದು ಸಂತೋಷದ ಸಂಗತಿ.ಹಿರಿಯರ ಮಾರ್ಗದರ್ಶನದೊಂದಿಗೆ ಮಕ್ಕಳು ಬೆಳೆಯಬೇಕು. ಮೊಮ್ಮಕ್ಕಳ ಮೇಲೆ ಹಿರಿಯರು ತೋರಿಸುವ ಕಾಳಜಿಯೇ ಬೇರೆ. ಅವರು ಮಕ್ಕಳೊಂದಿಗೆ ಮಕ್ಕಳಂತೆ ವರ್ತಿಸುತ್ತಾರೆ.ಬಾಲ್ಯ, ಯೌವ್ವನ, ಮುಪ್ಪು ಜೀವನದ ಚಕ್ರ ಇದ್ದಂತೆ. ಮೊಮ್ಮಕ್ಕಳು ಅಜ್ಜಿ ಅಜ್ಜಿಯರನ್ನು ಪ್ರೀತಿಸಬೇಕು ಎಂದು ನುಡಿದರು.

ಈ ವಿಶೇಷ ಕಾರ್ಯಕ್ರಮದ ಬಗ್ಗೆ ಮೊಮ್ಮಕ್ಕಳ ಜೊತೆ ಶಾಲೆಗೆ ಆಗಮಿಸಿದ ಅಜ್ಜಿ -ಅಜ್ಜಿಯರು ತಮ್ಮ ಸಂತಸವನ್ನು ಹಂಚಿಕೊಂಡರು. ಕುಮಾರಿ.ರಹಾಫ್ ಹಾಗೂ ಕುಮಾರಿ.ಶ್ರೇಯಾ ಅಜ್ಜಿ ಅಜ್ಜಿಂದರ ದಿನದ ಮಹತ್ವವನ್ನು ತಿಳಿಸಿದರು.ಶಾಲೆಯ ಪ್ರಾಚಾರ್ಯೆ ಕಾಂತಿ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಜ್ಜ- ಅಜ್ಜಿಯರಿಗೆ ವಿಶೇಷ ಆಟಗಳನ್ನು ಆಡಿಸಲಾಯ್ತು.