ಹೊನ್ನಾವರದ ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ, ವೇದಗಣಿತ ಪ್ರವೀಣರು, ಲೇಖಕರು, ಪ್ರಕಾಶಕರೂ ಆದ ಬೆಳಗಾವಿಯ ಪ್ರೊ, ಕುಶ್ ಎಂ ದುರ್ಗಿ ತರಬೇತಿ ನೀಡಿದ್ರು.
ಹೊನ್ನಾವರದ ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ, ವೇದಗಣಿತ ಪ್ರವೀಣರು, ಲೇಖಕರು, ಪ್ರಕಾಶಕರೂ ಆದ ಬೆಳಗಾವಿಯ ಪ್ರೊ, ಕುಶ್ ಎಂ ದುರ್ಗಿ ತರಬೇತಿ ನೀಡಿದ್ರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೇದಗಣಿತವನ್ನು ಕರಗತ ಮಾಡಿಕೊಂಡರೆ ಕಂಪ್ಯೂಟರ್ ಗಿಂತ ವೇಗವಾಗಿ ಗಣಿತವನ್ನು ಮಾಡಬಹುದು. ಇಂಗ್ಲೀಷ್ ಭಾಷೆಯನ್ನು ಹಾಗೂ ವೇದಗಣಿತವನ್ನು ತಮ್ಮದಾಗಿಸಿ ಕೊಂಡರೆ ವಿಶ್ವದ ಯಾವ ದೇಶದಲ್ಲಾದರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು, ಉದ್ಯೋಗವನ್ನು ಪಡೆಯಬಹುದು ಎಂದು ಹೇಳಿದ್ರು..
ಈ ವೇಳೆ ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ರವರು ಉಪಸ್ಥಿತರಿದ್ದರು.