ಹೊನ್ನಾವರದಲ್ಲಿ ಜೈ ಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ – ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣ ಆಚರಣೆ



ಹೊನ್ನಾವರದಲ್ಲಿ ಜೈ ಕರ್ನಾಟಕ ಜನಪರ ವೇದಿಕೆ ಸದಸ್ಯರು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಜೈ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಆರ್ .ಕೆ ಮೇಸ್ತ ನುಡಿಸಿರಿ ವಾಹಿನಿಯೊಂದಿಗೆ ಮಾತನಾಡಿ, ನಾವು ಪ್ರತಿವರ್ಷವು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತೇವೆ. ಇದೆ ತಿಂಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸುವ ಯೋಚನೆ ಇದೆ. ಮುಂದಿನ ವರ್ಷ ನವೆಂಬರದ 1ಕ್ಕೆ ಸಿದ್ದಾಪುರದಲ್ಲಿ ಇರುವಂತಹ ತಾಯಿ ಭುವನೇಶ್ವರಿ ದೇವಿಯ ಸನ್ನಿಧಾನಕ್ಕೆ ಹೋಗಲಿದ್ದೇವೆ ಎಂದು ಹೇಳಿದ್ರು..

ಇತ್ತೀಚಿಗೆ ಆಂಗ್ಲ ಮಾಧ್ಯಮವನ್ನೇ ಅವಲಂಭಿಸುವುದು ಹೆಚ್ಚಾಗಿದೆ. ಕನ್ನಡ ಶಾಲೆಗಳನ್ನು ಉಳಿಸಿ,ಕನ್ನಡ ಶಾಲೆಯನ್ನು ಬೆಳೆಸಬೇಕು. ಇಂಗ್ಲಿಷ್ ಮೀಡಿಯಂ ನಲ್ಲಿ ಸಿಗುವಂತಹದೆ ಉತ್ತಮ ಶಿಕ್ಷಣ ಕನ್ನಡ ಮಾಧ್ಯಮದಲ್ಲೂ ಸಿಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಿ ಎಂದು ಕರೆ ನೀಡಿದರು.

ಕೆಲವಡೆ ಕನ್ನಡ ರಾಜ್ಯೋತ್ಸವ ಎಂದರೆ ಅದ್ದೂರಿ ಡಿಜೆ ಸಂಭ್ರಮ,ಹೆಸರಿಗೆ ಮಾತ್ರ ಕನ್ನಡದ ಹಬ್ಬ ಉಳಿದೆಲ್ಲವು ಹಿಂದಿಮಯವಾಗಿರುತ್ತದೆ. ಇಂತವರು ಕೇವಲ ನವೆಂಬರ್ 1ರ ಕನ್ನಡಿಗರು ಎಂದರೆ ತಪ್ಪಾಗಲಾರದು. ಇದರ ಮಧ್ಯೆ ಕೆಲವು ಸಂಘಟನೆಗಳು ಕನ್ನಡದ ರಕ್ಷಣೆಗೆ ಹಾಗೂ ನಾಡಿನ ಮೇಲೆ ಅಭಿಮಾನ ಹೊಂದಿರುತ್ತವೆ. ಸರ್ಕಾರಿ ಆಸ್ಪತ್ರೆಗಳ ಮೇಲಿನ ಕಾಳಜಿ ಹೊಂದಿ ಅಲ್ಲಿಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದ ಇಂತಹ ಸಂಘಟನೆ,ಸಂಘಟಕರ ಕಾರ್ಯದ ಬಗ್ಗೆ ,ಆಸ್ಪತ್ರೆ ವೈದ್ಯಾಧಿಕಾರಿಗಳಿಂದ, ರೋಗಿಗಳಿಂದಲು ಮೆಚ್ಚುಗೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜೇಶ್ ಕಿಣಿ, ಜೈ ಕರ್ನಾಟಕ ಜನಪರ ವೇದಿಕೆ ಗೌರವಾಧ್ಯಕ್ಷ ಕೃಷ್ಣ ಹರಿಜನ್,ಉಪಾಧ್ಯಕ್ಷ ಜಾನ್ ರೊಡ್ರಗಿಸ್,ಕಾರ್ಯದರ್ಶಿ ಕೇಶವ ಮೇಸ್ತ,ಕೋಶಾಧ್ಯಕ್ಷ ಶ್ರೀಕಾಂತ ಮೇಸ್ತ,ರಮೇಶ್ ರಾಯ್ಕರ್,ನಾಗರಾಜ ಮೇಸ್ತ,ಗಣಪತಿ ಮೇಸ್ತ,ಪ್ರವೀಣ್ ಮೇಸ್ತ,ರಾಜೇಶ್ ಭಂಡಾರಿ, ಮಣಿಕಂಠ ಮೇಸ್ತ ಹಾಗೂ ವಿಘ್ನೇಶ್ ಮೇಸ್ತ ಉಪಸ್ಥಿತರಿದ್ದರು.