ಮೂಢ ಭಟ್ಕಳದ ಬೈಪಾಸ್‌ ಬಳಿ ಭೀಕರ ದುರಂತ – 8 ಮಂದಿಗೆ ಗಂಭೀರ ಗಾಯ

ಭಟ್ಕಳದ ಮೂಢ ಭಟ್ಕಳ ಬೈಪಾಸ್‌ ಬಳಿ ಇನೋವಾ ಮತ್ತು ಕ್ರೂಸರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 8 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮೂಢ ಭಟ್ಕಳದ ಬೈಪಾಸ್‌ ಬಳಿ ಇನೋವಾ ಮತ್ತು ಕ್ರೂಸರ್‌ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, 8 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಟ್ಕಳದಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಇನ್ನೋವಾ ಹಾಗೂ ಕುಂದಾಪುರದಿದ ಭಟ್ಕಳದ ಕಡೆಗೆ ಬರುತ್ತಿದ್ದ ಕ್ರೂಸರ್ ನಡುವೆ ಈ ಅಪಘಾತ ನಡೆದಿದ್ದು 8 ಮಂದಿ ಗಾಯ ಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಇನ್ನೊವಾ ಕಾರಿನಲ್ಲಿದ್ದ, ಗದಗ ಗಜೇಂದ್ರಗಡದ ನಿವಾಸಿ ರೇಷ್ಮಾ ರಾಠೋಡ, ಮಾರುತಿ ನಾಗಪ್ಪ, ಅಜಮೀರ ಹಾಗೂ ಕ್ರೂಸರನಲ್ಲಿದ್ದ ಬೀಮನಗೌಡ, ಮುನೀರಾ ಫಯಾಜ್, ಮಂದಾಕಿನಿ ಬಳೆಗಾರ, ಅನಸೂಯ ಉಪಾಸಿ, ಬಸವರಾಜ ಪೂಜಾರಿ, ಕಾಡಪ್ಪ ಉಪಾಸಿ ಎಂದು ಗುರುತಿಸಲಾಗಿದೆ.

ಅಪಘಾತದ ರಭಸಕ್ಕೆ ಎರಡೂ ವಾಹನಗಳ ಮುಂಭಾಗ ನಜ್ಜುಗ್ಗುಜ್ಜಾಗಿದೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…