ಜೋಯಿಡಾದಲ್ಲಿ ಜಿಂಕೆ ಕೋಡು ವಶ : ಓರ್ವನ ಬಂಧನ- ದಾಂಡೇಲಿಯ ಎ.ಸಿ.ಎಫ್ ಕಚೇರಿಯಲ್ಲಿ ವಿಚಾರಣೆ

ಜೋಯಿಡಾ : ಎರಡು ಜಿಂಕೆಗಳ ಕೋಡನ್ನು ಮನೆಯಲ್ಲಿ ಇಟ್ಕೊಂಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಿಂಕೆಯ ಕೋಡನ್ನು ವಶಪಡಿಸಿಕೊಂಡು ಹಾಗೂ ಓರ್ವನನ್ನು ಬಂಧಿಸಿದ ಘಟನೆ ಜೋಯಿಡಾ ತಾಲೂಕು ಕೇಂದ್ರದಲ್ಲಿ ಇಂದು ಗುರುವಾರ ನಡೆದಿದೆ.

ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದ ಹತ್ತಿರ ಇರುವ ಮನೆಯೊಂದರಲ್ಲಿ ಎರಡು ಜಿಂಕೆಗಳ ಕೋಡು ಪತ್ತೆಯಾಗಿದೆ. ಇದರ ಜೊತೆಯಲ್ಲಿ ಹುಲಿ ಉಗುರು ಇರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜೋಯಿಡಾ ತಾಲೂಕು ಕೇಂದ್ರದ ಶಿವಾಜಿ ವೃತ್ತದ ಬಳಿಯ ನಿವಾಸಿ ಪ್ರಕಾಶ್ ನಾಯ್ಕ ಎಂಬಾತನೇ ಆರೋಪಿಯಾಗಿದ್ದು ಈತನನ್ನು ಬಂಧಿಸಲಾಗಿದೆ.

ಈಗಾಗಲೇ ಆರೋಪಿಯ ವಿಚಾರಣೆ ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದು, ಈ ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಾಗಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಟ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಜೋಯಿಡಾ ವಲಯಾರಣ್ಯಾಧಿಕಾರಿ ಮಹಮ್ಮದ್ ಶಫಿ, ಬರ್ಚಿ ವಲಯಾರಣ್ಯಾಧಿಕಾರಿ ಅಶೋಕ್ ಶೆಳ್ಳೆನ್ನವರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.