ಭಾಗವತರ ಸಾವನ್ನು ನಾವು ಅರಗಿಸಿಕೊಳ್ಳುವುದು ಕಷ್ಟ- ವಸಂತ ನಾಯ್ಕ ಮನ್ಮನೆ

ಸಿದ್ದಾಪುರ: ಭಾಗವತರ ಸಾವನ್ನು ನಾವು ಅರಗಿಸಿಕೊಳ್ಳುವುದು ಕಷ್ಟ. ಸಿಕ್ಕಿರುವ ಅವಕಾಶ ದಲ್ಲಿ ಒಳ್ಳೆಯ ಕೆಲಸ ಮಾಡಬೇಕು, ಅವರ ಆದರ್ಶ ಗಳನ್ನು ಬೆಳಸಿಕೊಳ್ಲಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಹೇಳಿದರು.
ತಾಲೂಕಿನ ಬಿಳಗಿಯಲ್ಲಿ ಸಿಗಂದೂರು ಶ್ರೀ ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಕ್ರಪಾರ್ಶಿವಾದದೊಂದಿಗೆ, ದಿ. ರಾಮಚಂದ್ರ ನಾಯ್ಕ ಭಾಗವತ್ ಅಭಿಮಾನಿ ಗೆಳೆಯರ ಬಳಗದವರ ಸಹಯೋಗದಲ್ಲಿ ಮಲೆನಾಡಿನ ಗಾನಕೋಗಿಲೆ ಎಂದೆ ಖ್ಯಾತರಾದ ದಿ. ರಾಮಚಂದ್ರ ನಾಯ್ಕ ಭಾಗವತ ಹೆಮ್ಮನಬೈಲ್ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಭಾಗವತರ ಆತ್ಮ ಕ್ಕೆ ಶಾಂತಿ ಕೋರಿ ಒಂದು ನಿಮಿಷ ದ ಮೌನ ಆಚರಿಸಿದರು.
ದಿ ರಾಮಚಂದ್ರ ನಾಯ್ಕ್ ರಚಿಸಿ ನಿರ್ದೇಶಿಸಿದ ನಾಗಚೌಡೇಶ್ವರಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ ಎನ್ ನಾಯ್ಕ ಮಾತನಾಡಿ ಭಾಗವತರಿಗೆ ಮರಣೋತ್ತರವಾಗಿ ಆಕಾಡೆಮಿ ಪ್ರಶಸ್ತಿ ಕೊಡಬೇಕು, ಭಾಗವತರ ನ್ನು ಸಂಸ್ಕರಿಸುವ ಕೆಲಸ ಆಗಬೇಕು ಎಂದರು.
ಅಭಿಮಾನಿ ಬಳಗ ದ ಅಧ್ಯಕ್ಷ ಎಮ್ ಆರ್ ನಾಯ್ಕ ಕುರುವಂತೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿ. ರಾಮಚಂದ್ರ ಭಾಗವತರ ಪತ್ನಿ ಹಾಗೂ ಪುತ್ರ ನಿಗೆ ಸಂಸ್ಕರಣೆ ಪತ್ರ ವಿತರಿಸಲಾಯಿತು.