ಟ್ರ್ಯಾಕ್ಟರ್ ಚಲಾಯಿಸಿದ ಸುನೀಲ್ ಹೆಗಡೆ

ದಾಂಡೇಲಿ : ಅವರು ಮಾಜಿ ಶಾಸಕರು ಕಣ್ರೀ.‌ ಅದ್ರೂವೇ ಇಷ್ಟು ಸರಳವಾಗಿ ಇರ್ತಾರಾ‌ ಎಂಬ ಹಲವರ ಪ್ರಶ್ನೆಗೆ ಸರಳವಾಗಿ ಇರುತ್ತಾರೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ.

ಅಂದ ಹಾಗೆ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ಕಳೆದ 9 ದಿನಗಳಿಂದ ವಿಶೇಷ ಪೂಜಾರಾದನೆಗಳೊಂದಿಗೆ ಆರಾಧಿಸಲ್ಪಟ್ಟಿದ ದುರ್ಗಾಮಾತೆಯ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ದುರ್ಗಾಮಾತೆಯನ್ನು ಹೊತ್ತುಕೊಂಡ ಟ್ರ್ಯಾಕ್ಟರ್ ಅನ್ನು ಸ್ವತಹ ಸುನಿಲ್ ಹೆಗಡೆಯವರೇ ಚಲಾಯಿಸಿ ಸರಳತೆಯನ್ನು ಮೆರೆಯುವುದರ ಜೊತೆಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು