ಹಳಿಯಾಳದಲ್ಲಿ ದಾಂಡಿಯಾ ಆಡಿದ ಶಾಸಕ ಆರ್.ವಿ. ದೇಶಪಾಂಡೆ ದಂಪತಿ

ಹಳಿಯಾಳ : ಶಾಸಕ ಆರ್ ವಿ ದೇಶಪಾಂಡೆ ಅವರು ವಿಭಿನ್ನ ರಾಜಕಾರಣಿಯಾಗಿ ಗಮನ ಸೆಳೆದವರು. ರಾಜ್ಯದ ವರ್ಚಸ್ವಿ ಜನನಾಯಕರಾಗಿ ಗಮನ ಸೆಳೆದ ಆರ್ ವಿ ದೇಶಪಾಂಡೆ ಅವರು ತಮ್ಮ ಕ್ಷೇತ್ರದಲ್ಲಿ ಇರುವಂತಹ ಸಂದರ್ಭದಲ್ಲಿ ಕ್ಷೇತ್ರದ ಜನತೆಯ ಜೊತೆ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ನಡೆದುಕೊಳ್ಳುವ ರೀತಿ ಮಾತ್ರ ಅವರ ಹೃದಯ ವೈಶಾಲ್ಯತೆಯನ್ನು ಮೆರೆಯುವಂತಿದೆ.

ಅಂದ ಹಾಗೆ ಹಳಿಯಾಳ ಪಟ್ಟಣದ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ದಾಂಡಿಯಾ ಉತ್ಸವ ಕಾರ್ಯಕ್ರಮದಲ್ಲಿ ಮುದ್ದಿನ ಮಡದಿ ರಾಧಾಬಾಯಿ ದೇಶಪಾಂಡೆ ಅವರ ಜೊತೆ ತಾನು ಸಹ ಕೋಲಾಟವನ್ನು ಆಡಿ ಎಲ್ಲರ ಗಮನ ಸೆಳೆದರು. ಇದಕ್ಕೆ ಹೇಳುವುದು ದೇಶಪಾಂಡೆ ಅವರಿಗೆ ದೇಶಪಾಂಡೆ ಅವರೇ ಸಾಟಿ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು.