ದಾಂಡೇಲಿಯ ಬರ್ಚಿ ರಸ್ತೆಯಲ್ಲಿರುವ ಶ್ರೀ.ಹನುಮಾನ್ ಮಂದಿರದಿಂದ ಶ್ರೀ.ದುರ್ಗಾಮಾತಾ ದೌಡ್ ಕಾರ್ಯಕ್ರಮಕ್ಕೆ ಚಾಲನೆ

ದಾಂಡೇಲಿ : ಶ್ರೀ. ಶಿವ ಪ್ರತಿಷ್ಠಾನ ಹಿಂದುಸ್ಥಾನ ಇದರ ಆಶ್ರಯದಡಿ ನಡೆಯುತ್ತಿರುವ ಶ್ರೀ ದುರ್ಗಾಮಾತಾ ದೌಡ್ ಕಾರ್ಯಕ್ರಮವು ಭಾನುವಾರ ಎಂಟನೇ ದಿನಕ್ಕೆ ಮುಂದುವರಿದಿದ್ದು, ಇಂದು ನಗರದ ಬರ್ಚಿ ರಸ್ತೆಯಲ್ಲಿರುವ ಶ್ರೀ.ಹನುಮಾನ್ ಮಂದಿರದಿಂದ ಶ್ರೀ.ದುರ್ಗಾಮಾತಾ ದೌಡ್ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯ್ತು.

ಬರ್ಚಿ ರಸ್ತೆಯ ಶ್ರೀ.ಹನುಮಾನ್ ಮಂದಿರದಿಂದ ಆರಂಭಗೊಂಡ ಶ್ರೀ ದುರ್ಗಾಮಾತಾ ದೌಡ್ ಮೆರವಣಿಗೆಯು ಕುಳಗಿ ರಸ್ತೆ, ಮಿರಾಶಿ ಗಲ್ಲಿ, ಕೆ.ಸಿ.ವೃತ್ತ ಸಾಗಿ ಹಳಿಯಾಳ ರಸ್ತೆಯ ಮೂರು ನಂ ಗೇಟ್ ನಲ್ಲಿರುವ ಮಾರುತಿ ಮಂದಿರದಲ್ಲಿ ಸಂಪನ್ನಗೊಂಡಿತು.

ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಗವದ್ಭಕ್ತರು ಶ್ರೀ.ದುರ್ಗಾಮಾತಾ ದೌಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.