ಸಿದ್ದಾಪುರ. ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯಲ್ಲಿ ಶ್ರೀರಾಮದೇವರ ಮತ್ತು ಪರಿವಾರ ದೇವತೆಗಳ ಸನ್ನಿಧಿಯಲ್ಲಿ ಶನಿವಾರ ನವರಾತ್ರಿ ಪ್ರಯುಕ್ತ ಶ್ರೀರಾಮ ವನಾಭಿಗಮನ- ಪಾದುಕಾ ಪ್ರದಾನ ಎಂಬ ಆಖ್ಯಾನದ ತಾಳಮದ್ದಳೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭುವನೇಶ್ವರಿ ತಾಳಮದ್ದಳೆ ಕೂಟದ ಕಲಾವಿದರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಭಾಗವತರಾಗಿ ಗಜಾನನ ಭಟ್ಟ ತುಳಗೇರಿಮಠ ಧ್ವನಿಪೂರ್ಣ ಹಾಡುಗಾರಿಕೆಯಿಂದ ಮತ್ತು ಶ್ರೀಪತಿ ಹೆಗಡೆ ಕಂಚಿಮನೆ ಉತ್ತಮ ಮದ್ದಳೆವಾದನದ ಮೂಲಕ ಹಿಮ್ಮೇಳಕ್ಕೆ ಮೆರಗು ತಂದರು.
ಅರ್ಥಧಾರಿಗಳಾಗಿ ಎಂ.ಕೆ.ನಾಯ್ಕ ಹೊಸಳ್ಳಿ (ಮೊದಲ ಭಾಗದ ಶ್ರೀರಾಮ) ವಿ.ಶೇಷಗಿರಿ ಭಟ್ಟ ಗುಂಜಗೋಡ ( ಎರಡನೇ ಭಾಗದ ಶ್ರೀರಾಮ), ಜೈರಾಮ ಭಟ್ಟ ಗುಂಜಗೋಡ (ವಸಿಷ್ಠ) ಗಣಪತಿ ಹೆಗಡೆ ಗುಂಜಗೋಡ (ಭರತ) ಕೌಸ್ತುಭ ಹೆಗಡೆ ಅಳಗೋಡ (ಗುಹ ಮತ್ತು ಲಕ್ಷ್ಮಣ) ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದರು. ಗಣಪತಿ ಗುಂಜಗೋಡ ಕಾರ್ಯಕ್ರಮದ ಕುರಿತು ಮಾತನಾಡಿದರು. ಶ್ರೀ ರಾಮ ದೇವಾಲಯದ ಅಧ್ಯಕ್ಷ ಗಣಪತಿ ಕನ್ನಾ ನಾಯ್ಕ , ಸಮಿತಿಯ ಸದಸ್ಯರು ಹಾಗೂ ಊರನಾಗರಿಕರು ಮತ್ತು ಶ್ರೀಕಾಂತ ಭಟ್ಟ ಮುತ್ತಿಗೆ,ವಿನಾಯಕ ಭಟ್ಟ ಡೊಂಬೆಕೈ ಉಪಸ್ಥಿತರಿದ್ದರು. ಎಂ.ಕೆ.ನಾಯ್ಕ ಹೊಸಳ್ಳಿ ಸ್ವಾಗತಿಸಿದರು. ವಿಷ್ಣು ನಾಯ್ಕ ಹೊಸಳ್ಳಿ ವಂದಿಸಿದರು.